ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

Public TV
1 Min Read

ಮುಂಬೈ: ಯಾರಿಗೂ ಹೇಳದಂತೆ ಗುಟ್ಟಾಗಿ ವಿರುಷ್ಕಾ ಜೋಡಿ ಮದುವೆ ಆಗಿದೆ. ಮದುವೆ ನಂತರ ಟ್ವೀಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಎಲ್ಲರೊಡನೆ ಅನುಷ್ಕಾ ಮತ್ತು ವಿರಾಟ್ ಹಂಚಿಕೊಂಡಿದ್ರು. ನಂತರ ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದವು.

ಈಗ ಅಭಿಮಾನಿಗಳಲ್ಲಿ ವಿರುಷ್ಕಾ ಜೋಡಿ ಹನಿಮೂನ್ ಗೆ ಎಲ್ಲಿ ಹೋಗಲಿದ್ದಾರೆ ಎಂಬ ಪ್ರಶ್ನೆಗಳು ಹುಟ್ಟುಕೊಂಡಿದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇಬ್ಬರು ಪ್ರಪಂಚದ ಅತಿ ಸುಂದರ ಸ್ಥಳಗಳಲ್ಲೊಂದಾದ ಇಟಲಿ ರೋಮ್‍ಗೆ ತೆರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮೊದಲು ವಿರಾಟ್-ಅನುಷ್ಕಾ ದಕ್ಷಿಣ ಆಫ್ರಿಕಾಗೆ ಹನಿಮೂನ್ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಇದೇ ವೇಳೆ ವಿರಾಟ್ ಸೌಥ್ ಆಫ್ರಿಕಾದಲ್ಲಿ ನಡೆಯುವ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ ಎಂಬ ಒಂದು ವಿಷಯವನ್ನು ಮೂಲವು ಬಹಿರಂಗಪಡಿಸಿತ್ತು. ಹನಿಮೂನ್ ಮುಗಿಸಿ ಬಂದ ಮೇಲೆ ಭಾರತದಲ್ಲಿ ಗೆಳೆಯರಿಗೆ ಮತ್ತು ಬಂಧುಗಳಿಗೆ ವಿಶೇಷ ಔತಣಕೂಟವನ್ನು ವಿರುಷ್ಕಾ ಜೋಡಿ ಏರ್ಪಡಿಸಿದೆ.

ಇನ್ನು 2018 ಫೆಬ್ರವರಿಯಲ್ಲಿ ವರುಣ್ ಧವನ್ ಜೊತೆ ‘ಸೂಯಿ-ಧಾಗಾ’ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇತ್ತ ಹೋಮ್ ಪ್ರೊಡಕ್ಷನ್ ನಿರ್ಮಾಣವಾಗುತ್ತಿರುವ ‘ಪರಿ’ ಸಿನಿಮಾದ ಪ್ರಮೋಷನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

https://www.youtube.com/watch?v=gHvF38xCsiY

Share This Article
Leave a Comment

Leave a Reply

Your email address will not be published. Required fields are marked *