ವಿಶೇಷ ಚೇತನ ಮಕ್ಕಳ ‘ವಿರುಪಾ’!

Public TV
1 Min Read

ಬ್ಬರು ವಿಶಿಷ್ಟ ಚೇತನ ಮಕ್ಕಳ ಸಾಹಸಿ ಜೀವನದ ಕಥಾಹಂದರ ಹೊಂದಿರುವ ಚಿತ್ರ ವಿರುಪಾ. ಪುನೀತ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಮಂಗಳೂರಿನವರೇ ಆದ ಪುನೀತ್ ಶೆಟ್ಟಿ ಓದಿದ್ದು ಸಿದ್ದಗಂಗಾಮಠದಲ್ಲಿ. ಹಾಗಾಗಿ ಕರ್ನಾಟಕದಾದ್ಯಂತ ಆಡಿಷನ್ ನಡೆಸಿ ಕೊನೆಗೆ ತುಮಕೂರಿನಲ್ಲಿ ಈ ಎರಡು ಮಕ್ಕಳನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಶಾಯಿಲ್ ಹಾಗೂ ಚರಣ್ ಇವರಲ್ಲಿ ಅಗಾಧ ಪ್ರತಿಭೆಯಿದೆ. ಅದನ್ನು ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ನಿರ್ದೇಶಕ ಮಧುವನಹಳ್ಳಿ ಹಾಗೂ ರಾಮಾ ರಾಮಾ ರೇ ಖ್ಯಾತಿಯ ನಟರಾಜ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನಿರ್ದೇಶಕ ಪುನೀತ್ ಶೆಟ್ಟಿ ಮಾತನಾಡಿ ನಮ್ಮ ಮಕ್ಕಳು ನಮಗಿಂತ ಸುಖವಾಗಿ ಬದುಕಬೇಕೆಂಬ ಆಸೆಯಿಂದ ಪೋಷಕರು ಅವರ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಾರೆ. ಅವರ ಮನದಲ್ಲೇನಿದೆ ಎಂದು ತಿಳಿದುಕೊಳ್ಳಲು ಯಾರೂ ಪ್ರಯತ್ನಿಸುವುದಿಲ್ಲ. ಆದರೆ ಹಳ್ಳಿಯ ಮಕ್ಕಳು ಸ್ವತಂತ್ರವಾಗಿ ಬದುಕುತ್ತಿರುತ್ತಾರೆ. ಅವರ ಮೇಲೆ ಯಾವುದೇ ಒತ್ತಡ ಇರುವುದಿಲ್ಲ. ಹಾಗಾಗಿ ಅವರೇ ಜೀವನದಲ್ಲಿ ಬೇಗ ಮುಂದೆ ಬರುತ್ತಾರೆ ಎಂದು ವಿರುಪಾ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಫ್ರಾನ್ಸ್‍ನ ಡ್ಯಾನಿಯಲ್ ಎಂಬ 75 ವಯಸ್ಸಿನ ಕಲಾವಿದ ಈ ಚಿತ್ರದ ನಿರ್ಮಾಪಕ ಡಿಕ್ಸನ್ ಜಾಕಿ ಡಿಸೋಜಾ ಮಾತನಾಡಿ ವಿರುಪಾ ನಮ್ಮ ಮೊದಲ ಚಿತ್ರ. ಸೊಸೈಟಿಗೆ ಮೆಸೇಜ್ ಕೊಡಬೇಕೆಂದು ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.

ಸಂಗೀತ ನಿರ್ದೇಶಕರಾದ ಪ್ರದೀಪ್ ಮಳ್ಳೂರು ಮಾತನಾಡಿ ಈ ಚಿತ್ರ ಎಲ್ಲರಿಗೂ ಮೊದಲ ಪ್ರಯತ್ನ ಚಿತ್ರ ಕೊನೇ ಹಂತದವರೆಗೆ ಎಕ್ಸೈಟ್ಮೆಂಟ್ ಕೊಡುತ್ತದೆ. 2 ಹಾಡುಗಳಿದ್ದು ಸಿದ್ದು ಆರ್.ಒಡೆಯರ್ ಸಾಹಿತ್ಯ ಬರೆದಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *