ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

Public TV
2 Min Read

ನವದೆಹಲಿ: `ಇಂಡಿಯಾ’ ಬದಲು ದೇಶದ ಹೆಸರನ್ನು `ರಿಪಬ್ಲಿಕ್ ಆಫ್ ಭಾರತ್’ (Republic Of Bharat) ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ ಬೆನ್ನಲ್ಲೇ ಈಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅವರು ಬಿಸಿಸಿಐಗೆ ಆಗ್ರಹವೊಂದನ್ನು ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸೆಹ್ವಾಗ್, ಟೀಂ ಇಂಡಿಯಾದ (Team India) ಜೆರ್ಸಿಯಲ್ಲಿ ಹೆಸರು ಬದಲಾವಣೆ ಮಾಡಿ. ಟೀಂ ಇಂಡಿಯಾ ಬದಲಿಗೆ ಟೀಂ ಭಾರತ್ (Team Bharat) ಅಂತ ಜೆರ್ಸಿ ಬದಲಿಸುವಂತೆ ಬಿಸಿಸಿಐಗೆ (BCCI) ಮಾಜಿ ಕ್ರಿಕೆಟಿಗ ಒತ್ತಾಯಿಸಿದ್ದಾರೆ. ಅಲ್ಲದೆ ಈ ವಿಶ್ವಕಪ್‍ನಲ್ಲಿ ನಾವು ಕೊಹ್ಲಿ, ರೋಹಿತ್, ಬುಮ್ರಾ, ಜಡೇಜಾ ಅವರನ್ನು ಹುರಿದುಂಬಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತೀಯರು ಎಂಬುದೇ ಇರಲಿ ಮತ್ತು ಆಟಗಾರರು `ಭಾರತ್’ ಇರುವ ಜೆರ್ಸಿಯನ್ನು ಧರಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್‌ ಆಫ್‌ ಭಾರತ್‌’ ಅಂತ ಮರುನಾಮಕರಣ?

ವೀರೇಂದ್ರ ಸೆಹ್ವಾಗ್‌ ಮೊದಲೇ ಭಾರತ್‌ ಹೆಸರನ್ನು ಟ್ವೀಟ್‌ ಮಾಡಿದ್ದರು. ಭಾರತ- ಪಾಕಿಸ್ತಾನ (India Pakistan) ನಡುವಿನ ಏಷ್ಯಕಪ್‌ (Asia Cup) ಕ್ರಿಕೆಟ್‌ ಪಂದ್ಯದ ವೇಳೆ #BHAvsPAK ಎಂಬ ಹ್ಯಾಶ್‌ಟ್ಯಾಗ್‌ ಬಳಸಿದ್ದರು.

ಇತ್ತ Board of Control for Cricket in India (BCCI) ಬದಲು Board of Control for Cricket in BHARAT (BCCB) ಎಂಬುದಾಗಿ ಬದಲಾಯಿಸಬೇಕು ಎಂಬ ಕೂಗು ಕೂಡ ಎದ್ದಿದೆ. ಒಟ್ಟಿನಲ್ಲಿ `ಇಂಡಿಯಾ’ ಬದಲು ದೇಶದ ಹೆಸರನ್ನು `ರಿಪಬ್ಲಿಕ್ ಆಫ್ ಭಾರತ್’ ಎಂದು ಕರೆಯಬೇಕು ಎಂಬುದಾಗಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಣಯಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ `ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ `ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿದ ನಂತರ ಈ ಚರ್ಚೆ ಹುಟ್ಟಿಕೊಂಡಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್