ಧೋನಿ ಕುರಿತ ಅಭಿಮಾನಿ ಕಮೆಂಟ್ ಗೆ ತಿರುಗೇಟು ಕೊಟ್ಟ ಸೆಹ್ವಾಗ್

Public TV
1 Min Read

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಹುಟ್ಟುಹಬ್ಬಕ್ಕೆ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಶುಭಕೋರಿದ್ದರು. ಆದರೆ ಈ ಸಂದೇಶಕ್ಕೆ ಅಭಿಮಾನಿಯೊಬ್ಬ ಧೋನಿ ವಿರುದ್ಧ ಕಮೆಂಟ್ ಮಾಡಿದ್ದು, ಸದ್ಯ ಅಭಿಮಾನಿಯ ಹೇಳಿಕೆ ಸೆಹ್ವಾಗ್ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದಾರೆ.

ಸೆಹ್ವಾಗ್ ಅವರು ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದರಂತೆ ಹಲವು ಆಟಗಾರರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಾಲೆಳೆಯುತ್ತಾರೆ. ಇದರಂತೆ ಸೆಹ್ವಾಗ್ ಇಂದು ಸಹ ಧೋನಿ ಅವರಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಆದರೆ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಅಭಿಮಾನಿಯೊಬ್ಬ ಸೆಹ್ವಾಗ್ ಅವರ ವೃತ್ತಿ ಬದುಕನ್ನು ಕೊನೆಗೊಳಿಸಿದ ಫಿನಿಷರ್ ಗೆ ಹುಟ್ಟುಹಬ್ಬದ ಶುಭಾಶಯಗಳು ರಂದು ಕಮೆಂಟ್ ಮಾಡಿದ್ದಾರೆ.

ಸದ್ಯ ತಮ್ಮ ಅಭಿಮಾನಿಯ ಈ ಕಮೆಂಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯೇ ನೀಡಿರುವ ಸೆಹ್ವಾಗ್, ಇದು ಸುಳ್ಳು ಹೇಳಿಕೆ ಎಂದು ಮರು ಕಮೆಂಟ್ ಮಾಡಿ ತಿರುಗೇಟು ನೀಡಿದ್ದಾರೆ. ಇದಕ್ಕೂ ಮುನ್ನ ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಧೋನಿ ಅವರಿಗೆ ಶುಭಾಶಯ ತಿಳಿಸಿ, ಫೋಟೋ ಶೇರ್ ಮಾಡಿದ್ದರು. ಅಲ್ಲದೇ `ಓಂ ಫಿನಿಶಾಯ ನಮಃ’, ನ್ಯಾಷನಲ್ ಹೆಲಿಕಾಪ್ಟರ್ ಡೇ ಎಂಬ ಹ್ಯಾಷ್ ಟ್ಯಾಗ್ ಸಹ ಬಳಸಿದ್ದರು.

ಧೋನಿ ನಾಯಕತ್ವ ವಹಿಸಿದ ಬಳಿಕ ಹಲವು ಹಿರಿಯ ಆಟಗಾರನ್ನು ತಂಡದಿಂದ ಕೈ ಬಿಡಲಾಗಿತ್ತು. ಈ ವೇಳೆ ಹಿರಿಯ ಆಟಗಾರರನ್ನು ತಂಡದಿಂದ ಕೈ ಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡುವುದು ಧೋನಿ ಉದ್ದೇಶ ಎಂಬ ವಾದವು ಚರ್ಚೆಯಾಗಿತ್ತು. ಆದರೆ ಸದ್ಯ ಮತ್ತೊಮ್ಮೆ ಅಭಿಮಾನಿ ಧೋನಿ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *