ಹೊಸ ಅವತಾರದ ವೀರೇಂದ್ರ ಸೆಹ್ವಾಗ್ ಫೋಟೋ ವೈರಲ್!

Public TV
1 Min Read

ಮುಂಬೈ: ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಬಳಿಕ ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಯಾಶೀಲರಾಗಿರುವ ಸೆಹ್ವಾಗ್ ತಮ್ಮದೇ ವಿಶೇಷ ಫೋಟೊವೊಂದನ್ನು ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆಯೂ ಹಲವು ಬಾರಿ ಕ್ರಿಕೆಟ್ ಆಟಗಾರರು ಸೇರಿದಂತೆ ತಮ್ಮ ಆತ್ಮೀಯರನ್ನು ತಮ್ಮ ಟ್ವೀಟ್ ಮೂಲಕ ಕಾಲೆಳೆಯುತ್ತಿದ್ದ ಸೆಹ್ವಾಗ್, ಸದ್ಯ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಬಾಬಾ ವೇಷದಲ್ಲಿ ಕಾಣಿಸಿಕೊಂಡಿರುವ ಸೆಹ್ವಾಗ್, ಗುರು ಕಾರ್ನಾ ಜಾನ್ ಕರ್, ಪಾನಿ ಪೀನಾ ಚಾನ್ ಕರ್. ಜೈ ಭೋಲೆ! ಜೈ ಶ್ರೀ ರಾಮ್! ಜೈ ಬಜರಂಗಬಲಿ! ಎಂದು ಸ್ವಾಮೀಜಿ ಶೈಲಿಯಲ್ಲಿ ಫೋಟೋಗೆ ಅಡಿ ಬರಹವನ್ನು ನೀಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹುಟ್ಟುಹಬ್ಬದ ವಿಶೇಷವಾಗಿ ಟ್ವೀಟ್ ಮಾಡಿ ಸೆಹ್ವಾಗ್ ಗಮನ ಸೆಳೆದಿದ್ದರು. ಗಂಗೂಲಿ ಮೈದಾನದಲ್ಲಿ ಹೇಗಿರುತ್ತಾರೆ ಎಂದು ತಿಳಿಸಿ 4 ಉದಾಹರಣೆ ನೀಡಿ ಪೂರಕವಾಗಿ 4 ಫೋಟೋಗಳನ್ನು ಸೆಹ್ವಾಗ್ ನೀಡಿದ್ದರು. ಇದರಲ್ಲಿ ವಿಶೇಷವಾಗಿ ಗಂಗೂಲಿ ಜೀವನ ಶ್ರೇಷ್ಠ ಬ್ಯಾಟಿಂಗ್ ನೆನಪಿಸುವ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 183 ರನ್ ಸಿಡಿದ್ದ ಫೋಟೋ, ಬಳಿಕ ಅಭಿಮಾನಿಯೊಬ್ಬ ಗಾಯಗೊಂಡು ರಕ್ತ ಸುರಿಸಿದ್ದು, ಗಂಗೂಲಿ ಬೌಲಿಂಗ್ ಫೋಟೋ ಸೇರಿದಂತೆ ನ್ಯಾಟ್‍ವೆಸ್ಟ್ ಟೆಸ್ಟ್ ಸರಣಿ ಗೆದ್ದ ವೇಳೆ ಶಾರ್ಟ್ ಬಿಚ್ಚಿ ಸಂಭ್ರಮಿಸಿದ್ದ ಫೋಟೋಗಳು ಪೋಸ್ಟ್ ಮಾಡಿದ್ದರು. ಸೆಹ್ವಾಗ್ ಅವರ ಈ ನಡೆ ಹಲವು ಅಭಿಮಾನಿಗಳಿಗೆ ಇಷ್ಟವಾಗಿದ್ದು, ಅವರ ಟ್ವೀಟ್ ಗಳಿಗೆ ಮರುಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *