ಲಂಡನ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್, ಕ್ರಿಕೆಟ್ ಲೋಕದ ಕಿಂಗ್, ರನ್ ಮಿಷಿನ್ ವಿರಾಟ್ ಕೊಹ್ಲಿ (Virat Kohli) ಒಂದು ತಿಂಗಳ ಬಳಿಕ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಇತ್ತೀಚೆಗೆ ಕೊಹ್ಲಿ ಲಂಡನ್‌ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ (Team India) ಪರ ಕೊನೆಯ ಬಾರಿಗೆ ಏಕದಿನ ಆಡಿದ್ದ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಮತ್ತು ಟಿ20ಐ ಗಳಿಂದ ನಿವೃತ್ತಿ ಹೊಂದಿದ್ದರೂ, ಏಕದಿನ ಪಂದ್ಯಗಳಲ್ಲಿ ತಂಡದ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್ ಕಿಂಗ್ಸ್ ಸೇರಲು ಸಂಜು ಕಾತರ?
ಭಾರತ ಮೂಲದ ಉದ್ಯಮಿ Shassh ಹಂಚಿಕೊಂಡ ಚಿತ್ರದಲ್ಲಿ, ಕೊಹ್ಲಿ ಗಾಢ ನೀಲಿ ಬಣ್ಣದ ಜಾಗರ್‌ನೊಂದಿಗೆ ತಿಳಿ ಬೂದು ಬಣ್ಣದ ಟಿ-ಶರ್ಟ್ ಮತ್ತು ಅದರ ಮೇಲೆ ಗಾಢ ಬೂದು ಬಣ್ಣದ ಜಿಪ್-ಅಪ್ ಹೂಡಿ ಧರಿಸಿದ್ದಾರೆ. ಆದ್ರೆ, ಯಾವಾಗಲೂ ಕಪ್ಪು ಬಣ್ಣದಲ್ಲಿರುತ್ತಿದ್ದ ಕೊಹ್ಲಿ ಅವರ ಗಡ್ಡ ಇದೀಗ ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಅಲ್ಲದೇ ‘ಕಿಂಗ್ ಕೊಹ್ಲಿ ಜೊತೆ ಇರುವಾಗ ಶೀರ್ಷಿಕೆ ಅಗತ್ಯವಿಲ್ಲ’ ಶಶ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಫೋಟೋ ವೈರಲ್ ಆಗುತ್ತಿದ್ದಂತೆ ಏಕದಿನ ಕ್ರಿಕೆಟ್ ನಿವೃತ್ತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ.
ಜುಲೈ 10ರಂದು ಯುವರಾಜ್ ಸಿಂಗ್ ಅವರ YouWeCan ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಟೆಸ್ಟ್ ನಿವೃತ್ತಿ ಕುರಿತು ಮಾತನಾಡುವಾಗ, ತಮ್ಮ ಗಡ್ಡಕ್ಕೆ ಪ್ರತಿ ಕೆಲವು ದಿನಗಳಿಗೊಮ್ಮೆ ಬಣ್ಣ ಹಚ್ಚುವ ಬಗ್ಗೆ ತಮಾಷೆಯಾಗಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಬಾಗಲಕೋಟೆ | ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಭ್ ಪಂತ್ ಆರ್ಥಿಕ ನೆರವು
ಕೊಹ್ಲಿಯ ಈ ರೀತಿಯ ‘ಲುಕ್’ ಇದೇ ಮೊದಲೇನಲ್ಲ. 2023ರ ಜುಲೈನಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ತೆಗೆಯಲಾದ ಫೋಟೋದಲ್ಲೂ ಅವರ ಬೂದು ಗಡ್ಡ ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಇದನ್ನೂ ಓದಿ: ದೂರವಾದಾಗಲೇ ಬೆಲೆ ತಿಳಿಯೋದು – ಮತ್ತೆ ಒಂದಾಗುತ್ತೇವೆಂದ ಸೈನಾ ನೆಹ್ವಾಲ್ ದಂಪತಿ
ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಕೆಲವೇ ನಿಮಿಗಳಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದ ಕೊಹ್ಲಿ, ಈ ವರ್ಷ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್‌ನೆ ನಿವೃತ್ತಿ ಘೋಷಿಸಿದ್ದರು. ಈಗ ಕೊಹ್ಲಿ ಅಕ್ಟೋಬರ್ ನಲ್ಲಿ ಆಸೀಸ್ ವಿರುದ್ಧ ನಡೆಯಲಿರುವ ಸೀಮಿತ ಓವರ್ ಗಳ ಪ್ರವಾಸದಲ್ಲಿ ಭಾರತ ತಂಡ ಸೇರುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಭಾರತವು ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನು ಆಡಲಿದೆ.