ನಾನು ಫಿಟ್ ಆಗಿದ್ದೇನೆ, ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ: ಕೊಹ್ಲಿ

Public TV
1 Min Read

ನವದೆಹಲಿ: ನಾನು ಸಂಪೂರ್ಣ ಫಿಟ್ ಆಗಿದ್ದೇನೆ, ಸಾಬೀತುಪಡಿಸುವ ಅಗತ್ಯವಿಲ್ಲ. ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಟೆಸ್ಟ್ ಸರಣಿ ಹಾಗೂ ತಮ್ಮ ಬ್ಯಾಟಿಂಗ್ ಫಾರ್ಮ್ ಬಗ್ಗೆ ಸುದ್ದಿಗಾರರೊಂದಿ ಮಾತನಾಡಿದ್ದಾರೆ. ಈ ವೇಳೆ ಅವರು ನಾನು ಫಿಟ್ ಆಗಿದ್ದೇನೆ. ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 

View this post on Instagram

 

A post shared by Virat Kohli (@virat.kohli)

ನನ್ನ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳು ಏಳುತ್ತಿರುವುದು ಇದೇನು ಮೊದಲಲ್ಲ. 2014ರ ಇಂಗ್ಲೆಂಡ್ ಪ್ರವಾಸದ ವೇಳೆಯೂ ಇದು ನಡೆದಿತ್ತು. ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ. ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ನಾವು ತುಂಬಾ ಕ್ರಿಕೆಟ್ ಆಡುತ್ತಿದ್ದೇವೆ. ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಲು ಬಯಸುತ್ತೇವೆ. ಹೀಗಾಗಿ ಆಟಗಾರರು ಗಾಯಗೊಳ್ಳುವುದು ಸಾಮಾನ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್‌

ಹೊರಗಿನ ಪ್ರಪಂಚವು ನನ್ನನ್ನು ನೋಡುವ ಹಾಗೆ ನಾನು ನನ್ನನ್ನು ನೋಡುವುದಿಲ್ಲ. ನಾನು ತಂಡಕ್ಕಾಗಿ ಅತ್ಯುತ್ತಮವಾದ ಕೆಲಸ ಮಾಡಲು ಬಯಸುತ್ತೇನೆ. ಆಟದಲ್ಲಿ ಕೆಲವೊಮ್ಮೆ ನೀವು ಬಯಸಿದ ರೀತಿಯಲ್ಲಿ ನಡೆಯುವುದಿಲ್ಲ. ಆದರೆ ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ನಾನು ಬ್ಯಾಟರ್ ಆಗಿ ಬಹಳ ಮುಖ್ಯವಾದ ಕ್ಷಣಗಳಲ್ಲಿ ಭಾಗಿಯಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕೊರೊನಾ

Share This Article
Leave a Comment

Leave a Reply

Your email address will not be published. Required fields are marked *