ಕಪಿಲ್ ದೇವ್, ಸಚಿನ್ ಬಳಿಕ ಕೊಹ್ಲಿ ಮೇಣದ ಪ್ರತಿಮೆ ಅನಾವರಣ

Public TV
1 Min Read

ನವದೆಹಲಿ: ಇಲ್ಲಿನ ವಿಶ್ವ ಪ್ರಸಿದ್ಧ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಬುಧವಾರ ಅನಾವರಣ ಮಾಡಲಾಗಿದೆ.

ಇದರೊಂದಿಗೆ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಹಾಗೂ ಫುಟ್‍ಬಾಲ್ ಆಟಗಾರರಾದ ಲಿಯೊನೆಲ್ ಮೆಸ್ಸಿ ಅವರ ಸಾಲಿಗೆ ಸೇರ್ಪಡೆಯಾಗಿದೆ.

https://www.facebook.com/MadameTussaudsDelhi/photos/a.843804762454393.1073741835.700891473412390/1006064589561742/?type=3&theater

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಈ ಸಾಧನೆಗೆ ತಮ್ಮನ್ನು ಪರಿಗಣಿಸಿದಕ್ಕೆ ಧನ್ಯವಾದ. ಇದಕ್ಕೆ ಕಾರಣರಾದ ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲಕ್ಕೆ ಚಿರಋಣಿಯಾಗಿರುತ್ತೇನೆ. ಇದನ್ನು ನನ್ನ ಜೀವಮಾನದ ನೆನಪಾಗಿ ನಿರ್ಮಿಸಿದ ಮೇಡಂ ಟುಸ್ಸಾಡ್ಸ್‍ಗೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

ಕೊಹ್ಲಿ ಅವರ ಪ್ರತಿಮೆ ಯನ್ನು ನಿರ್ಮಿಸಲು ಅವರ 200 ನಿರ್ದಿಷ್ಟ ಅಳತೆಗಳನ್ನು ಬಳಕೆ ಮಾಡಲಾಗಿದ್ದು, ಏಕದಿನ ಮಾದರಿ ಕ್ರಿಕೆಟ್ ನಲ್ಲಿ ಧರಿಸುವ ಜೆರ್ಸಿ ಯೊಂದಿಗೆ ಅಭಿಮಾನಿಗಳು ಕೊಹ್ಲಿ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಮ್ಯೂಸಿಯಂ ನಲ್ಲಿ ಈಗಾಗಲೇ ಹಲವು ಬಾಲಿವುಡ್, ಹಾಲಿವುಡ್ ಹಾಗೂ ವಿವಿಧ ರಾಜಕೀಯ ವ್ಯಕ್ತಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ.

https://www.facebook.com/MadameTussaudsDelhi/photos/a.843804762454393.1073741835.700891473412390/927567617411440/?type=3&theater

https://www.facebook.com/MadameTussaudsDelhi/photos/a.843804762454393.1073741835.700891473412390/897304160437786/?type=3&theater

https://www.facebook.com/MadameTussaudsDelhi/photos/a.843804762454393.1073741835.700891473412390/885157314985804/?type=3&theater

https://www.facebook.com/MadameTussaudsDelhi/photos/a.843804762454393.1073741835.700891473412390/876037235897812/?type=3&theater

Share This Article
Leave a Comment

Leave a Reply

Your email address will not be published. Required fields are marked *