… your content …

ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

Public TV
1 Min Read

– ಲಾರ್ಡ್‌ನಲ್ಲಿ ಪ್ರಾಕ್ಟಿಸ್‌ನಲ್ಲಿ ಬ್ಯುಸಿ

ಲಂಡನ್: ಮುಂಬರುವ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ ಸರಣಿಗಾಗಿ ಸ್ಟಾರ್ ಇಂಡಿಯಾ (India) ಆಟಗಾರ ವಿರಾಟ್ ಕೊಹ್ಲಿ (Virat Kohli) ಪ್ರ್ಯಾಕ್ಟಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಟಿ20 ಮತ್ತು ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಏಕದಿನ ಪಂದ್ಯಕ್ಕೂ (ODI) ಕೂಡ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಚರ್ಚೆಯ ನಡುವೆಯೇ ಕೊಹ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ (Lord’s Stadium) ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ; ಬೆಂಕಿ ಹಚ್ಚಿ ಮಹಿಳೆ ಕೊಂದ ಪತಿ, ಅತ್ತೆ-ಮಾವ

ಹೌದು, ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಸಿದ್ಧತೆ ನಡೆಸುತ್ತಿದ್ದು, ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ ಬಳಿಕ ಬ್ರೇಕ್‌ನಲ್ಲಿರುವ ಕೊಹ್ಲಿ ಸದ್ಯ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದು, ಏಕದಿನ ಪಂದ್ಯಕ್ಕಾಗಿ ಪ್ರ್ಯಾಕ್ಟಿಸ್‌ ನಡೆಸುತ್ತಿದ್ದಾರೆ.

ಮುಂದಿನ ಅ.19ರಿಂದ ಅ.25ರವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ ದಿಗ್ಗಜರಾದ ವಿರಾಟ್, ರೋಹಿತ್ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ.ಇದನ್ನೂ ಓದಿ: ಶಿವಮೊಗ್ಗ | ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ

Share This Article