ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

By
1 Min Read

ಮುಂಬೈ: ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.

ಧೋನಿ 2014-15ರಲ್ಲಿ ಟೆಸ್ಟ್ ತಂಡದನಾಯಕತ್ವ ತ್ಯಜಿಸಿದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದರು. ನಂತರ ಇದೀಗ 7 ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನಡೆಸಿ ಇಂದು ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ನಾಯಕತ್ವಕ್ಕೆ ವಿದಾಯ ಹೇಳುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿಗೆ ವಿಶೇಷವಾದ ಧನ್ಯವಾದ ಸಲ್ಲಿಸಿದ್ದಾರೆ. ನಾನು ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಅಂದು ಧೋನಿ ನನ್ನ ಮೇಲೆ ನಂಬಿಕೆ ಇಟ್ಟು ನಾಯಕತ್ವವನ್ನು ನನಗೆ ಒಪ್ಪಿಸಿದ್ದರು. ಧೋನಿಯ ಬಳಿಕ ನಾನು ನಾಯಕನಾಗಿ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದೇನೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಶಾಕಿಂಗ್‌ ಡಿಆರ್‌ಎಸ್‌ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್‌ ಎಂದು ವಾಹಿನಿಯಿಂದ ಸಮರ್ಥನೆ

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಒಟ್ಟು 68 ಟೆಸ್ಟ್‌ಗಳಲ್ಲಿ ನಾಯಕನಾಗಿ ಮುನ್ನಡೆಸಿರುವ ಕೊಹ್ಲಿ 40 ಜಯ, 17 ಸೋಲು ಕಂಡು, 58.52% ಗೆಲುವಿನ ಸರಾಸರಿಯೊಂದಿಗೆ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಧೋನಿ 60 ಪಂದ್ಯಗಳಲ್ಲಿ ನಾಯಕನಾಗಿ 27 ಪಂದ್ಯ ಜಯ ಗಳಿಸಿ ಕೊಹ್ಲಿ ಬಳಿಕದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟೆಸ್ಟ್ ಸರಣಿ ಸೋಲಿಗೆ ಕಾರಣವಾಯಿತೇ ಪೂಜಾರ, ರಹಾನೆ ಬ್ಯಾಟಿಂಗ್ ವೈಫಲ್ಯ?

ಟೀಂ ಇಂಡಿಯಾವನ್ನು ಟೆಸ್ಟ್ ರ್‍ಯಾಕಿಂಗ್‍ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದ ಕೊಹ್ಲಿ, ಐಸಿಸಿ ಟ್ರೋಫಿ ಜಯಿಸಲು ಮಾತ್ರ ವಿಫಲವಾಗಿದ್ದರು. ಇದನ್ನು ಹೊರತು ಪಡಿಸಿ ಕೊಹ್ಲಿ ಉತ್ತಮವಾಗಿ ನಾಯಕತ್ವವನ್ನು ನಿರ್ವಹಿಸಿ ಇದೀಗ ಮೂರು ಮಾದರಿ ನಾಯಕತ್ವವನ್ನು ತ್ಯಜಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *