ನಿವೃತ್ತಿಯಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ – ಕೊಹ್ಲಿ ಆಹ್ವಾನಿಸಿದ ಪಾಕ್ ಅಭಿಮಾನಿ

Public TV
2 Min Read

ನವದೆಹಲಿ: ಟೀಂ ಇಂಡಿಯಾದ ರನ್ ಮಿಷಿನ್ ಖ್ಯಾತಿಯ ವಿರಾಟ್ ಕೊಹ್ಲಿಗೆ (Virat kohli) ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಪಾಕಿಸ್ತಾನದ (Pakistan) ಅಭಿಮಾನಿಯೊಬ್ಬ ಹಿಡಿದಿರುವ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿದೆ.

ಸದ್ಯ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (England) ತಂಡಗಳು ಏಳು ಟಿ20 (T20) ಪಂದ್ಯಗಳ ಸರಣಿಯಲ್ಲಿ ಸೆಣಸಾಟ ನಡೆಸುತ್ತಿವೆ. ಪಾಕಿಸ್ತಾನದಲ್ಲೇ ಆಯೋಜನೆಗೊಂಡಿರುವ ಈ ಟೂರ್ನಿಯಲ್ಲಿ ಸದ್ಯ 6 ಪಂದ್ಯಗಳು ಮುಕ್ತಾಯವಾಗಿದ್ದು, 3*3 ಅಂತರದಲ್ಲಿ ಸಮಬಲ ಸಾಧಿಸಿವೆ. ಲಾಹೋರ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಕೊಹ್ಲಿ ಅಭಿಮಾನಿಯೊಬ್ಬರು ವಿಶೇಷ ಸಂದೇಶದ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ. ಪೋಸ್ಟರ್‌ನಲ್ಲಿ `ವಿರಾಟ್, ನೀವು ನಿವೃತ್ತರಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ’ ಎಂದು ಬರೆಯಲಾಗಿದೆ.

ಈ ಪೋಸ್ಟರ್ ಹಿಡಿದ ಅಭಿಮಾನಿಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, `ವಿರಾಟ್ ಕೊಹ್ಲಿ (Virat Kohli) ಪಾಕಿಸ್ತಾನದಲ್ಲಿ ಆಡಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ

ಈವರೆಗೆ 102 ಟೆಸ್ಟ್, 262 ಏಕದಿನ ಮತ್ತು 108 T20 ಪಂದ್ಯಗಳಲ್ಲಿ ಅಬ್ಬರಿಸಿರುವ ಕಿಂಗ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಆಡುವ ದೇಶಗಳ ಪೈಕಿ ಪಾಕಿಸ್ತಾನ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಲ್ಲೂ ಬ್ಯಾಟ್ ಬೀಸಿದ್ದಾರೆ. ಸದ್ಯ ಕ್ರಿಕೆಟ್ (Cricket) ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿರುವ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಪಾಕಿಸ್ತಾನ ಹೊರತುಪಡಿಸಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ 71 ಶತಕಗಳನ್ನ ಸಿಡಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ಬುಮ್ರಾ – ಮೆಡಿಕಲ್ ಟೀಂನಿಂದ ಶುಭ ಸುದ್ದಿ

ಕೊಹ್ಲಿ ಪಾಕ್‌ನಲ್ಲಿ ಆಡಿಯೇ ಇಲ್ಲ: ಭಾರತ ತಂಡ 2006ರಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಕೊಹ್ಲಿ ಆಗಿನ್ನೂ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. ನಂತರ ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ತಂಡಗಳ ನಡುವೆ ಕಳೆದ 10 ವರ್ಷಗಳಲ್ಲಿ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಆದ್ದರಿಂದ ಕೊಹ್ಲಿ ಪಾಕ್ ನೆಲದಲ್ಲಿ ಆಡಲು ಸಾಧ್ಯವಾಗಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *