ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

Public TV
1 Min Read

ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದ್ದು , ಈ ಸಿನಿಮಾದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ನಟಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಸಿನಿಮಾದ ಟೈಟಲ್ ಹೊಂದಿರುವ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಸೋನಮ್ ಕಪೂರ್ ಬೇಬಿ ಬಂಪ್

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ. ಈ ಸಿನಿಮಾದ ಮುಂದಿನ ಹಂತದ ಶೂಟಿಂಗ್ ಗಾಗಿ ಅವರು ಕೊಂಚ ದಪ್ಪ ಆಗುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳಲೆಂದೇ ಶೂಟಿಂಗ್ ನಿಲ್ಲಿಸಲಾಗಿದೆ. ಈ ಮಧ್ಯ ವಿರಾಟ್ ಕೊಹ್ಲಿ ಇರುವ ಪೋಸ್ಟರ್ ವೊಂದು ರಿಲೀಸ್ ಆಗಿ ಭಾರೀ ಕುತೂಹಲವಂತೂ ಮೂಡಿಸಿದೆ.

ವಿರಾಟ್ ಕೊಹ್ಲಿ ಬೀಚ್ ದಂಡೆಯಲ್ಲಿ ಕೇವಲ ಚಡ್ಡಿ ಮೇಲೆ ಕುಳಿತಿರುವ ಫೋಟೋ ಅದಾಗಿದ್ದು, ಈ ಹಿಂದೆ ಸಿನಿಮಾ ತಂಡವು ಪೋಸ್ಟರ್ ಗಳನ್ನು ರಿಲೀಸ್ ಮಾಡಿದಂತೆಯೇ ಈ ಪೋಸ್ಟರ್ ಕೂಡ ಇದೆ. ಹೀಗಾಗಿ ಹಲವರು ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಹೇಮಂತ್ ರಾವ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ರಣ್‌ಬೀರ್ ಕಪೂರ್ ಒಬ್ಬರೇ ನನ್ನನ್ನು ಹಾಗೆ ಕರೆಯುತ್ತಾರೆ ಎಂದ ರಶ್ಮಿಕಾ

ಅಂದಹಾಗೆ ಇದು ಸಿನಿಮಾದ ಪೋಸ್ಟರ್ ಅಲ್ಲ. ಯಾರೋ ಫ್ಯಾನ್ಸ್ ಸಿನಿಮಾದ ಟೈಟಲ್ ಬಳಸಿಕೊಂಡು ಈ ಪೋಸ್ಟರ್ ರೆಡಿ ಮಾಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿಗೂ ಕೂಡ ಟ್ಯಾಗ್ ಮಾಡಿದ್ದಾರೆ. ಮೊನ್ನೆಯಷ್ಟೇ ಹೆಂಡತಿಯ ಜೊತೆ ಟ್ರಿಪ್ ನಲ್ಲಿರುವ ವಿರಾಟ್, ಈ ಫೋಟೋವನ್ನು ಹಂಚಿಕೊಂಡಿದ್ದರು. ಅದನ್ನೇ ಫ್ಯಾನ್ಸ್ ಪೋಸ್ಟರ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *