ದ್ರಾವಿಡ್ ದಾಖಲೆ ಬ್ರೇಕ್ ಮಾಡ್ತಾರಾ ಕೊಹ್ಲಿ!

Public TV
2 Min Read

ಲಂಡನ್: ಇಂಗ್ಲೆಂಡ್ ವಿರುದ್ಧದ ಇನ್ನುಳಿದ 2 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿಯುವ ಅವಕಾಶವಿದೆ.

ರಾಹುಲ್ ದ್ರಾವಿಡ್ ಇಂಗ್ಲೆಂಡ್ ನೆಲದಲ್ಲಿ ನಡೆದ ಟೂರ್ನಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 2002 ರಲ್ಲಿ ನಡೆದ ಟೂರ್ನಿಯ 4 ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ 602 ರನ್ ಸಿಡಿಸಿ ದಾಖಲೆ ಬರೆದಿದ್ದರು. ಸದ್ಯ ವಿರಾಟ್ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ 440 ರನ್ ಗಳಿಸಿದ್ದು, ಇನ್ನುಳಿದ 2 ಪಂದ್ಯಗಳಲ್ಲಿ ದ್ರಾವಿಡ್ ಸಾಧನೆಯನ್ನು ಸರಿಗಟ್ಟುವ ಅವಕಾಶ ಸಿಕ್ಕಿದೆ.

ಕೊಹ್ಲಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್, ಇಂಗ್ಲೆಂಡ್ ತಂಡದ ಜೋ ರೂಟ್ ಹಾಗೂ ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸ್ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 5 ಸ್ಥಾನ ಪಡೆದಿರುವ ಆಟಗಾರರಾಗಿದ್ದು, ಇವರಲ್ಲಿ ಕೊಹ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಟೆಸ್ಟ್ ವೃತ್ತಿ ಜೀವನದಲ್ಲಿ ಕೊಹ್ಲಿ ಒಟ್ಟಾರೆ 5,994 ರನ್ ಗಳಿಸಿದ್ದು, 6 ಸಾವಿರ ರನ್ ಪೂರೈಸಲು ಕೇವಲ 6 ರನ್ ಅಗತ್ಯವಿದೆ. ಮುಂದಿನ ಟೆಸ್ಟ್ ನಲ್ಲಿ 6 ಸಾವಿರ ರನ್ ಗಳಿಸಿದರೆ ಟೀಂ ಇಂಡಿಯಾ ಪರ 6 ಸಾವಿರ ರನ್ ಪೂರೈಸಿದ 10ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ. ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನೀಲ್ ಗವಾಸ್ಕರ್ (10,122), ವಿವಿಎಸ್ ಲಕ್ಷ್ಮಣ್ (8,781), ವಿರೇಂದ್ರ ಸೆಹ್ವಾಗ್ (8,503), ಸೌರವ್ ಗಂಗೂಲಿ (7,212), ದಿಲೀಪ್ ವೆಂಗ್‍ಸರ್ಕರ್ (6,868), ಮೊಹಮ್ಮದ್ ಅಜರುದ್ದೀನ್ (6,215) ಮತ್ತು ಗುಂಡಪ್ಪ ವಿಶ್ವನಾಥ್ (6,080) ರನ್ ಗಳಿಸಿದ ಆಟಗಾರರ ಕ್ಲಬ್‍ನಲ್ಲಿ ಸ್ಥಾನ ಪಡೆದಿದ್ದಾರೆ.

ಆಸೀಸ್ ಆಟಗಾರ ಸ್ಮಿತ್ 6,199 ರನ್ ಗಳಿಸಿದ್ದು, ಸ್ಮಿತ್ ರನ್ ಹಿಂದಿಕ್ಕಲು ಕೊಹ್ಲಿಗೆ ಕೇವಲ 205 ರನ್‍ಗಳ ಅಗತ್ಯವಿದೆ. ಅಲ್ಲದೆ ರೂಟ್ 6,102 ರನ್ ಗಳಿಸಿದ್ದು, ಕೊಹ್ಲಿ 108 ರನ್ ಗಳಿಂದ ಹಿಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮುಂದಿನ 2 ಪಂದ್ಯದಲ್ಲಿ ಕೊಹ್ಲಿ ತಮ್ಮ ಫಾರ್ಮ್ ಮುಂದುವರಿಸಿದರೆ ಈ ಇಬ್ಬರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಅಲ್ಲದೇ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 23 ಶತಕ ಗಳಿಸಿದ್ದು, ಸ್ಮಿತ್ ಕೂಡ ಅಷ್ಟೇ ಶತಕ ಗಳಿಸಿದ್ದಾರೆ. ಅದ್ದರಿಂದ ಶತಕ ಗಳಿಕೆಯಲ್ಲೂ ಕೊಹ್ಲಿ, ಸ್ಮಿತ್‍ರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *