T20 World Cup 2024: ಪತ್ನಿಗೆ ವೀಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ- ಫೋಟೋ ವೈರಲ್‌

Public TV
2 Min Read

– ವೀಡಿಯೋ ಕಾಲ್‌ನಲ್ಲಿ ಮಕ್ಕಳೊಂದಿಗೆ ವಿರಾಟ್‌ ತುಂಟಾಟ

ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಬರೋಬ್ಬರಿ 17 ವರ್ಷಗಳ ಬಳಿಕ ICC T20 ವಿಶ್ವಕಪ್ ಟ್ರೋಫಿಯನ್ನು ಟೀಂ ಇಂಡಿಯಾ (Team India) ತಂಡ ಎತ್ತಿ ಹಿಡಿದಿದೆ. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ಭಾವನಾತ್ಮಕ ದಿನವಾಗಿದೆ.

ಶನಿವಾರ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಟೀಂ ಇಂಡಿಯಾವನ್ನು ಸೋಲಿಸಿತು. ಗೆಲುವಿನ ನಂತರ ಕ್ರಿಕೆಟಿಗ ವಿರಾಟ್‌ ಕೊಹ್ಲಿಯವರು (Virat Kohli) ತಮ್ಮ ಸಹ ಆಟಗಾರರನ್ನು ಅಭಿನಂದಿಸುತ್ತಾ ಭಾವುಕರಾದರು. ಬಳಿಕ ತಮ್ಮ ಕುಟುಂಬದ ಜೊತೆಯೂ ಮಾತನಾಡುತ್ತಾ ಆನಂದಭಾಷ್ಪ ಸುರಿಸಿದ್ದಾರೆ.

ಮೈದಾನದಿಂದಲೇ ತಮ್ಮ ಪತ್ನಿಗೆ ವೀಡಿಯೋ ಕಾಲ್ ಮಾಡಿ ಮಕ್ಕಳೊಂದಿಗೆ ಮಾತನಾಡುತ್ತಾ ಕೊಹ್ಲಿ ಭಾವುಕರಾಗಿದ್ದಾರೆ. ‌ ಅನುಷ್ಕಾ ಮತ್ತು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗಿನ ವೀಡಿಯೊ ಕರೆಯಲ್ಲಿ ತುಂಟಾಟದ ಮುಖಗಳೊಂದಿಗೆ ಫ್ಲೈಯಿಂಗ್ ಕಿಸ್‌ಗಳನ್ನು ನೀಡಿದ್ದಾರೆ. ಪತ್ನಿ ಜೊತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌; 7 ಪಂದ್ಯಗಳಲ್ಲಿ ಕೇವಲ 75 ರನ್‌, 8ನೇ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ 76 ರನ್‌

ಇತ್ತ ಅನುಷ್ಕಾ ಶರ್ಮಾ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪತಿಯನ್ನು ಹೊಗಳಿದ್ದಾರೆ. ಅಲ್ಲದೇ ಮಗಳು ವಾಮಿಕಾಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಎಲ್ಲಾ ಆಟಗಾರರು ಟಿವಿಯಲ್ಲಿ ಅಳುತ್ತಿರುವುದನ್ನು ನೋಡಿದ ನಂತರ, ನಮ್ಮ ಮಗಳ ದೊಡ್ಡ ಚಿಂತೆ ಎಂದರೆ ಅವಳನ್ನು ತಬ್ಬಿಕೊಳ್ಳಲು ಯಾರಾದರೂ ಇದ್ದಾರೆಯೇ ಎಂಬುದು. ಹೌದು ಪ್ರಿಯರೇ, ಅವರನ್ನು 1.5 ಬಿಲಿಯನ್ ಜನರು ತಬ್ಬಿಕೊಂಡರು. ಎಂತಹ ಸ್ಮರಣೀಯ ಗೆಲುವು ಮತ್ತು ಸಾಧನೆ. ಚಾಂಪಿಯನ್ ಗಳಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ವಿರಾಟ್ ಕೊಹ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 59 ಎಸೆತಗಳಲ್ಲಿ 76 ರನ್‌ ಹೊಡೆದ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಸ್‌ಪ್ರೀತ್‌ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Share This Article