ಪಂದ್ಯದಲ್ಲಿ ಗೆದ್ದಿದ್ಯಾರು? ಮೆಚ್ಚುಗೆಗೆ ಪಾತ್ರವಾಯ್ತು ಕೊಹ್ಲಿ ಮಾತು

Public TV
1 Min Read

ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯನ್ನು ಟೀಂ ಇಂಡಿಯಾ 5-0 ಅಂತರದಲ್ಲಿ ಗೆದ್ದು ಬೀಗಿದೆ. ಸದ್ಯ ನಾಯಕ ವಿರಾಟ್ ಕೊಹ್ಲಿ ಮಾತುಗಳನ್ನು ಕೇಳಿದ್ರೆ ಪಂದ್ಯದಲ್ಲಿ ಗೆದ್ದಿದ್ಯಾರು ಎಂಬ ಸಣ್ಣ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಸರಣಿ ಗೆಲುವಿನ ಬಳಿಕ ಕೊಹ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದನ್ನು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಭಾನುವಾರ ಪಡೆದ ನಡೆದ ಪಂದ್ಯದಿಂದ ಇತ್ತಂಡಗಳ ನಾಯಕರು ವಿಶ್ರಾಂತಿ ಪಡೆದಿದ್ದರು. ಪಂದ್ಯದ ವೀಕ್ಷಿಸುತ್ತಾ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್  ಮಾತನಾಡುತ್ತಿದ್ದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪಂದ್ಯದ ಬಳಿಕ ಕೊಹ್ಲಿ ಅವರಿಗೆ ನ್ಯೂಜಿಲೆಂಡ್ ತಂಡದ ನಾಯಕನ ಬಗ್ಗೆ ಕೇಳಿದಾಗ ವಿಲಿಯಮ್ಸನ್  ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ: 10 ರನ್ ಅಂತರದಲ್ಲಿ 4 ವಿಕೆಟ್ ಪತನ- ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಕೊಹ್ಲಿ ಹೇಳಿದ್ದೇನು? ವಿಲಿಯಮ್ಸನ್ ಮತ್ತು ನನ್ನ ಮಾನೋಭಾವನೆ ಒಂದೇ ಆಗಿದೆ. ಬಹುತೇಕ ಸಂದರ್ಭಗಳಲ್ಲಿಯೂ ಇಬ್ಬರೂ ಒಂದೇ ರೀತಿಯಲ್ಲಿ ಯೋಚಿಸುತ್ತವೆ. ನನ್ನ ಪ್ರಕಾರ ನ್ಯೂಜಿಲೆಂಡ್ ತಂಡ ಸೂಕ್ತ ವ್ಯಕ್ತಿಯ ನಾಯಕತ್ವದಲ್ಲಿದೆ. ತಂಡವನ್ನು ಮುನ್ನಡೆಸಲು ವಿಲಿಯಮ್ಸನ್ ಸೂಕ್ತ ಮತ್ತು ಸಮರ್ಥ ವ್ಯಕ್ತಿ. ಅವರ ಮುಂದಿನ ಭವಿಷ್ಯ ಮತ್ತು ಏಕದಿನ ಸರಣಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ. ಎಲ್ಲ ಕ್ರಿಕೆಟ್ ಅಭಿಮಾನಿಗಳು ನ್ಯೂಜಿಲೆಂಡ್ ತಂಡದ ಆಟವನ್ನು ನೋಡಲು ಇಷ್ಟಪಡುತ್ತಾರೆ. ಇತರೆ ತಂಡಗಳು ನ್ಯೂಜಿಲೆಂಡ್ ಎಂಬ ಬಲಿಷ್ಠ ಟೀಂ ವಿರುದ್ಧ ಆಡಲು ಇಷ್ಟಪಡುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ

ಕೊಹ್ಲಿ ಮಾತುಗಳಿಗೆ ಕ್ರಿಕೆಟ್ ಅಂಗಳದಲ್ಲಿ ಮೆಚ್ಚುಗೆ ಕೇಳಿ ಬರುತ್ತಿದೆ. ಟೀಂ ಇಂಡಿಯಾ 5-0 ಅಂತರದಲ್ಲಿ ಗೆದ್ದರೂ, ನ್ಯೂಜಿಲೆಂಡ್ ಒಂದು ಬಲಿಷ್ಠ ತಂಡ ಎಂದು ಕೊಹ್ಲಿ ಹಾಡಿ ಹೊಗಳಿದ್ದಾರೆ. ಕೊಹ್ಲಿ ಮಾತು ಕೇಳಿದವರು ಒಂದು ಕ್ಷಣ ಸರಣಿಯಲ್ಲಿ ಗೆದ್ದಿದ್ಯಾರು ಎಂದು ಪ್ರಶ್ನೆ ಮಾಡಿಕೊಂಡಿದ್ದುಂಟು. ಇದನ್ನೂ ಓದಿ: ಕೆಟ್ಟ ದಾಖಲೆಗೆ ಗುರಿಯಾದ ಶಿವಂ ದುಬೆ

Share This Article
Leave a Comment

Leave a Reply

Your email address will not be published. Required fields are marked *