ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

Public TV
1 Min Read

ಬೆಂಗಳೂರು: ಇದೀಗ ಬೆಂಗಳೂರಿಗೆ ಬಂದಿಳಿದ ಆರ್‌ಸಿಬಿ ತಂಡವು ಹೆಚ್‌ಎಎಲ್‌ನಿಂದ ತಾಜ್ ವೆಸ್ಟೆಂಡ್ ಹೊಟೇಲ್‌ಗೆ ತೆರಳುತ್ತಿದ್ದ ವೇಳೆ ಅಭಿಮಾನಿಗಳನ್ನ ಕಂಡ ವಿರಾಟ್ ಕೊಹ್ಲಿ, ಚಾಂಪಿಯನ್ ಟ್ರೋಫಿಯನ್ನು ತೋರಿಸಿ ಸಂತಸಪಟ್ಟರು.

18 ವರ್ಷಗಳ ಬಳಿಕ ಮೊದಲ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು. ಹೆಚ್‌ಎಎಲ್‌ನಿಂದ ತಾಜ್ ವೆಸ್ಟೆಂಡ್‌ವರೆಗಿನ ದಾರಿಯುದ್ದಕ್ಕೂ ಅಭಿಮಾನಿಗಳ ಸಾಗರವೇ ನೆರೆದಿತ್ತು. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

ರಸ್ತೆ ಇಕ್ಕೆಲಗಳಲ್ಲೆಲ್ಲಾ ಫ್ಯಾನ್ಸ್ ನಿಂತು `ಆರ್‌ಸಿಬಿ.. ಆರ್‌ಸಿಬಿ.. ಕೊಹ್ಲಿ.. ಕೊಹ್ಲಿ’ ಎಂದು ಕೂಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಫ್ಯಾನ್ಸ್‌ಗಳ ಹರುಷವನ್ನು ಕಂಡ ವಿರಾಟ್ ಕೊಹ್ಲಿ ಅವರು ಬಸ್‌ನಲ್ಲೇ ಕುಳಿತು ಅಭಿಮಾನಿಗಳಿಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟರು. ಇದನ್ನೂ ಓದಿ: ಬೆಂಗಳೂರಿಗೆ ʻರಾಯಲ್‌ʼ ಆಗಿ ಎಂಟ್ರಿ ಕೊಟ್ಟ ಆರ್‌ಸಿಬಿ ತಂಡ

ಟ್ರೋಫಿ ಮೇಲೆ ಕೈತಟ್ಟಿ ‘ಈ ಸಲ ಕಪ್ ನಮ್ದು’ ಎಂಬಂತೆ ಸನ್ನೆ ಮಾಡಿದರು. ಕೊಹ್ಲಿಯನ್ನು ಕಂಡು ಅಭಿಮಾನಿಗಳು ಫುಲ್ ಥ್ರಿಲ್ ಆದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವ – ಟಿಕೆಟ್‌, ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

Share This Article