‘ಪ್ಲೆಸೆಂಟ್ ಸರ್ಪ್ರೈಸ್ ಹಾರ್ದಿಕ್’: ಕೊಹ್ಲಿ

Public TV
1 Min Read

ನವದೆಹಲಿ: ಕಳೆದ ಕೆಲ ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ವರ್ಷದ ಮೊದಲ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

ಹೊಸ ವರ್ಷದ ಶುಭಾಶಯಗಳನ್ನು ಗೆಳೆತಿಯೊಂದಿಗೆ ತಿಳಿಸಿದ್ದ ಹಾರ್ದಿಕ್, ಆ ಬಳಿಕ ಕೆಲವೇ ಗಂಟೆಗಳಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನ ಹಂಚಿಕೊಂಡಿದ್ದರು. ಸದ್ಯ ಹಾರ್ದಿಕ್‍ರ ನಿಶ್ಚಿತಾರ್ಥಕ್ಕೆ ಶುಭ ಕೋರಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪ್ಲೆಸೆಂಟ್ ಸರ್ಪ್ರೈಸ್. ನಿಮ್ಮ ಭವಿಷ್ಯ ಮತ್ತಷ್ಟು ಉತ್ತಮವಾಗಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಕೊಹ್ಲಿರೊಂದಿಗೆ ಹಲವು ಕ್ರಿಕೆಟ್ ಆಟಗಾರರು, ಬಾಲಿವುಡ್ ನಟರು ಕೂಡ ಹಾರ್ದಿಕ್ ಪಾಂಡ್ಯ ಜೋಡಿಗೆ ಶುಭಕೋರಿದ್ದಾರೆ.

 

View this post on Instagram

 

Mai tera, Tu meri jaane, saara Hindustan. ???????? 01.01.2020 ❤️ #engaged

A post shared by Hardik Pandya (@hardikpandya93) on

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ  ನಡೆದ ದಕ್ಷಿಣ ಆಫ್ರಿಕಾ ಸಿರೀಸ್ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದ ಹಾರ್ದಿಕ್ ಕ್ರಿಕೆಟ್ ನಿಂದ  ದೂರವಾಗಿದ್ದರು. ಆ ಬಳಿಕ ಲಂಡನ್‍ನಲ್ಲಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇತ್ತೀಚೆಗೆ ಕ್ರಿಕೆಟ್ ತರಬೇತಿಗೆ ಮರಳಿದ್ದ ಹಾರ್ದಿಕ್ ತಂಡಕ್ಕೆ ವಾಪಸಾಗುವ ಸಿದ್ಧತೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *