ನೆಚ್ಚಿನ ಮಡದಿಗೆ ಎಲ್ಲರೆದರು ‘ಥ್ಯಾಂಕ್ ಯು’ ಅಂದ್ರು ವಿರಾಟ್ ಕೊಹ್ಲಿ

Public TV
1 Min Read

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮಗೆ ಬೆಂಬಲವಾಗಿ ನಿಂತ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಸರಣಿಯ ಅಂತಿಮ ಪಂದ್ಯದ ಗೆಲುವಿನ ನಂತರ ಮಾತನಾಡಿದ ಕೊಹ್ಲಿ, ಈ ಸಾಧನೆಗೆ ಪ್ರೇರಣೆಯಾದ ಆತ್ಮೀಯರೆಲ್ಲರಿಗೂ ಧನ್ಯವಾದ ತಿಳಿಸಿದರು. ಸರಣಿಯ ಉದ್ದಕ್ಕೂ ಪತ್ನಿ ತನಗೆ ಬೆಂಬಲವಾಗಿ ನಿಂತರು. ತಂಡವನ್ನು ಮುಂದೆ ನಿಂತು ನಡೆಸುವುದೇ ಒಂದು ಅದ್ಭುತ ಭಾವನೆ ಎಂದು ಎಂದರು.

ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇನ್ನು 8 ರಿಂದ 9 ವರ್ಷಗಳು ಉಳಿದಿದೆ. ಅದ್ದರಿಂದ ನಾನು ಪ್ರತಿ ಸನ್ನಿವೇಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ. ಟೀಂ ಇಂಡಿಯಾ ನಾಯಕನಾಗಿ ಆಡುವುದು ನನ್ನ ಅದೃಷ್ಟ. ತಂಡದ ನಾಯಕನಾಗಿ ಶುಕ್ರವಾರ ನಡೆದ ಪಂದ್ಯದಲ್ಲಿ ಉತ್ತಮ ಫಾರ್ಮ್ ನಲ್ಲಿದೆ. ಈ ಸ್ಥಳದಲ್ಲಿ ಲೈಟ್ಸ್ ಕೆಳಗೆ ಬ್ಯಾಟಿಂಗ್ ನಡೆಸುವುದು ಹೆಚ್ಚು ಖುಷಿಕೊಡುತ್ತದೆ. ಅದ್ದರಿಂದಲೇ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಾಯಿತು. ನಂತರದಲ್ಲಿ ಲೈಟ್ಸ್ ನಡುವೆ ಬ್ಯಾಟಿಂಗ್ ನಡೆಸಲು ಪಿಚ್ ಉತ್ತಮವಾಗಿತ್ತು ಎಂದು ಹೇಳಿದರು.

ಇದೇ ವೇಳೆ ಟೀಂ ಇಂಡಿಯಾದ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಆರಂಭಿಕರು ಬ್ಯಾಟಿಂಗ್ ನಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಸರಣಿಯಲ್ಲಿ ಮುಂದಿನ ಟಿ20 ಪಂದ್ಯಗಳ ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ತಿಳಿಸಿದರು.

ಆಫ್ರಿಕಾ ವಿರುದ್ಧ ಅಂತಿಮ ಪಂದ್ಯದಲ್ಲಿ ಕೊಹ್ಲಿ 96 ಎಸೆತಗಳಿಗೆ 129 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಒಟ್ಟಾರೆ 558 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಪರ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ನಾಯಕ ಎಂಬ ಹೆಗ್ಗಳಿಕೆ ಪಡೆದರು.

 

Share This Article
Leave a Comment

Leave a Reply

Your email address will not be published. Required fields are marked *