ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

Public TV
1 Min Read

ಝಾನ್ಸಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದುವೆಯಾದ್ದಕ್ಕೆ ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ದೇಶದಲ್ಲಿ ಹಣ ಮತ್ತು ಕೀರ್ತಿಯನ್ನು ಸಂಪಾದಿಸಿ ಇಟಲಿಗೆ ಹೋಗಿ ಮದುವೆಯಾಗಿದ್ದಾರೆ. ದೇವರಾಗಿರುವ ರಾಮ, ಕೃಷ್ಣನಂತವರೇ ಭಾರತದಲ್ಲಿ ಮದುವೆಯಾಗಿರುವಾಗ ವಿದೇಶದಲ್ಲಿ ಮದುವೆಯಾಗಿದ್ದು ಎಷ್ಟು ಸರಿ? ಇಟಲಿಗೆ ಹೋಗಿ ಮದುವೆಯಾದ ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಗುನದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

ಯಾರು ದೇಶಕ್ಕೆ ವಿಧೇಯರಾಗಿರುತ್ತಾರೋ ಅವರು ಜನರಿಗೆ ಪ್ರೇರಕ ಶಕ್ತಿ ಆಗುತ್ತಾರೆ. ಹೀಗಾಗಿ ಕೊಹ್ಲಿ ಭಾರತೀಯರಿಗೆ ಪ್ರೇರಣೆಯಾಗಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಕಿಲ್ ಇಂಡಿಯಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಟಲಿಯ ಡ್ಯಾನ್ಸರ್ ಭಾರತದಲ್ಲಿ ಶತಕೋಟ್ಯಾಧಿಪತಿ ಆಗಿದ್ದರೆ, ಕೊಹ್ಲಿ ಭಾರತದ ಸಂಪತ್ತನ್ನು ಬೇರೆ ದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಒಂದು ವೇಳೆ ಭಾರತದಲ್ಲೇ ವಿರುಷ್ಕಾ ಜೋಡಿ ಮದುವೆಯಾಗಿದ್ದರೆ ಪ್ರವಾಸೋದ್ಯಮಕ್ಕೆ ಸಹಾಯವಾಗುತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

ಬಿಜೆಪಿ ಶಾಸಕರ ಹೇಳಿಕೆಗೆ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ಪ್ರತಿಕ್ರಿಯಿಸಿ, ಗುಜರಾತ್ ನಲ್ಲಿ ಜಯಗಳಿಸಿದ ಬಳಿಕ ಬಿಜೆಪಿ ಇಲ್ಲೂ ರಾಷ್ಟ್ರೀಯತೆ ವಿಚಾರವನ್ನು ಬಿತ್ತಲು ಆರಂಭಿಸಿದೆ. ಅವರ ದೊಡ್ಡ ನಾಯಕ ನಿವೃತ್ತ ಸೇನಾ ಮುಖ್ಯಸ್ಥ, ಮಾಜಿ ಉಪರಾಷ್ಟ್ರಪತಿ, ಮಾಜಿ ಪ್ರಧಾನಿ ವಿಚಾರವನ್ನು ಪ್ರಸ್ತಾಪಿಸಿ ಗುಜರಾತಿನಲ್ಲಿ ಸಮಾಜವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅದರ ಮುಂದುವರಿದ ಭಾಗವಾಗಿ ಈಗ ಅದೇ ತಂತ್ರವನ್ನು ಇಲ್ಲೂ ಪ್ರಯೋಗಿಸುತ್ತಿರುವುದು ಸ್ಪಷ್ಟವಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಈ ತಂತ್ರ ಫಲಕಾರಿಯಾಗುವುದಿಲ್ಲ ಎಂದು ಹೇಳಿದರು.

2018ರ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

https://youtu.be/gHvF38xCsiY

Share This Article
Leave a Comment

Leave a Reply

Your email address will not be published. Required fields are marked *