ಅನುಷ್ಕಾ ಜೊತೆ ಫುಲ್ ಜಾಲಿಮೂಡ್‍ನಲ್ಲಿರುವ ವಿರಾಟ್ ಕೊಹ್ಲಿ

Public TV
1 Min Read

ನ್ಯೂಯಾರ್ಕ್: ಟೀಂ ಇಂಡಿಯಾದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಅಮೆರಿಕದ ನ್ಯೂಯಾರ್ಕ್‍ನಲ್ಲಿದ್ದು, ತಮ್ಮ ಗೆಳತಿ ಅನುಷ್ಕಾ ಜಿತೆ ಫುಲ್ ಎಂಜಾಯ್ ಮಾಡುತ್ತಿದ್ದಾರೆ.

https://www.instagram.com/p/BWc8u2pAosX/?taken-by=virat.kohli

ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ ಬಳಿಕ ಫ್ರೀ ಆಗಿರೋ ವಿರಾಟ್ ಗೆಳತಿ ಅನುಷ್ಕಾಳೊಂದಿಗೆ `ಐಫಾ ಅವಾರ್ಡ್’ ಸಮಾರಂಭದಲ್ಲಿ ಭಾಗಿಯಾಗಲು ನ್ಯೂಯಾರ್ಕ್ ತೆರಳಿದ್ದಾರೆ.

https://www.instagram.com/p/BUdvQBklZCt/?taken-by=anushkasharma.club

ಸದ್ಯ ಕೆಲವು ದಿನಗಳ ಕಾಲ ಫ್ರೀಯಾಗಿರೋ ವಿರಾಟ್ ಬಹುದಿನಗಳ ನಂತರ ಅನುಷ್ಕಾಳೊಂದಿಗೆ ಡೇಟ್‍ನಲ್ಲಿದ್ದಾರೆ. ಕೊಹ್ಲಿ ತಮ್ಮ ಗೆಳತಿ ಅನುಷ್ಕಾ ಶರ್ಮಾನೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/BT1onPIlFHV/?taken-by=anushkasharma.club

ಫೋಟೋಗಳು ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿವೆ. ಕೊಹ್ಲಿ `ನಾನು ತುಂಬಾ ದಿನಗಳ ನಂತರ ನನ್ನ ಪ್ರೀತಿಯೊಂದಿಗೆ ಸಮಯವನ್ನು ಕಳೆಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಭಾರತದ ಕ್ರಿಕೆಟ್ ತಂಡ ಜುಲೈ 26ರಿಂದ ಸೆಪ್ಟಂಬರ್ 6ರವರೆಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.

https://www.instagram.com/p/BV_WhDDl5md/?taken-by=anushkasharma.club

ಇದೇ ತಿಂಗಳು 15ರಂದು ಬಾಲಿವುಡ್‍ನ ಐಫಾ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಈಗಾಗಲೇ ಬಾಲಿವುಡ್ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ನ್ಯೂಯಾರ್ಕ್ ನಗರಕ್ಕೆ ಆಗಮಿಸಿದ್ದಾರೆ.

 

https://www.instagram.com/p/BQhiXVqgS0v/?taken-by=virat.kohli

https://www.instagram.com/p/BV6FSIoFOyD/?taken-by=anushkasharma.club

https://www.instagram.com/p/BVi1uM-lRsh/?taken-by=anushkasharma.club

https://www.instagram.com/p/BTkplNzl0ku/?taken-by=anushkasharma.club

https://www.instagram.com/p/BU58dnelkfw/?taken-by=anushkasharma.club

https://www.instagram.com/p/BUe1Y9nlFzR/?taken-by=anushkasharma.club

Share This Article
Leave a Comment

Leave a Reply

Your email address will not be published. Required fields are marked *