ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್

Public TV
1 Min Read

ನವದೆಹಲಿ: ಮದುವೆಗೂ ಮುನ್ನ ವಧು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮೋಜಿನ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣವಾಗಿರುತ್ತವೆ. ಈ ವೇಳೆ ವಧು ತಮ್ಮ ಮದುವೆಯ ದಿನದಂದು ನಾಚಿಕೆಯಿಂದ ತಮ್ಮ ಸಂಭ್ರಮದ ದಿನವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಆದರೆ ವಧು ಎಲ್ಲರ ಮುಂದೆ ಡ್ಯಾನ್ಸ್ ಮಾಡುವ ಹಾಗಿರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ತಮ್ಮ ಕನಸಿನ ದಿನವನ್ನು ವಧು-ವರರು ಮತ್ತಷ್ಟು ಬಣ್ಣಗಳಿಂದ ತುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ಒಂದು ವೀಡಿಯೋ ಈಗ ವೈರಲ್ ಆಗಿದ್ದು, ವಧು ತನ್ನ ಹೃದಯಕ್ಕೆ ತೋಚಿದಂತೆ ಕುಣಿದು ಕುಪ್ಪಳಿಸಿದ್ದಾಳೆ. ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು, ವಧು-ವರನಿಗೆ ಶುಭಕೋರುತ್ತಿದ್ದಾರೆ. ಇದನ್ನೂ ಓದಿ: ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

ವೀಡಿಯೋದಲ್ಲಿ ಏನಿದೆ?
ಸುಂದರವಾದ ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವಧು ಯಾರೂ ನೋಡದ ರೀತಿ ನಾಚಿಕೊಂಡು ನೃತ್ಯ ಮಾಡುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಧೋಲ್ ಶಬ್ದಕ್ಕೆ ರೋಮಾಂಚನಗೊಂಡ ವಧು ತನ್ನದೇ ಶೈಲಿಯಲ್ಲಿ ಸೂಪರ್ ಆಗಿ ಹೆಜ್ಜೆ ಹಾಕಿದ್ದಾಳೆ.

ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ವರರು ಏಕೆ ಎಲ್ಲ ರೀತಿಯ ಸಂಭ್ರಮ, ಸಡಗರ ಹೊಂದಿರಬೇಕು? ‘ನಾಚಿಕೆಯಿಲ್ಲದ ವಧು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox copy: ಮೋದಿ ವ್ಯಂಗ್ಯ

ವೀಡಿಯೋ ನೋಡಿದ ನೆಟ್ಟಿಗರು, ಒಂದು ವೀಡಿಯೋದಲ್ಲಿ ಎಲ್ಲ ವಧುಗಳ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ವೀಡಿಯೋ ನೋಡಿ ನಗು ತಡೆದುಕೊಳ್ಳಲು ಆಗುತ್ತಿಲ್ಲ, ಬ್ರೈಡ್ ಆಫ್ 2022 ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *