ಅಬ್ಬಬ್ಬಾ.. ಮೊದಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಾ ಮೊನಾಲಿಸಾ?

Public TV
1 Min Read

ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ (Maha Kumbhamela) ತನ್ನ ಕಣ್ಣುಗಳಿಂದಲೇ ಎಲ್ಲರ ನಿದ್ದೆಗೆಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಶೇಷ ಅಂದರೆ, ತಾವು ನಟಿಸುತ್ತಿರುವ ಮೊದಲ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು

ಇಂಟರ್‌ನೆಟ್‌ನ ಸೆನ್ಸೇಷನಲ್ ಮೊನಾಲಿಸಾಗೆ (Monalisa Bhonsle) ಸಿನಿಮಾದಲ್ಲಿ ನಟಿಸಲು ಬೇಡಿಕೆ ಹೆಚ್ಚಾಗಿದೆ. ಸದ್ಯ ಒಪ್ಪಿಕೊಂಡಿರುವ ಬಾಲಿವುಡ್‌ನ `ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದರು. ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 21 ಲಕ್ಷ ರೂ. ಪಡೆದಿದ್ದಾರಂತೆ. ಇದರೊಟ್ಟಿಗೆ ಸ್ಥಳೀಯ ಚಿತ್ರದ ಪ್ರಚಾರಕ್ಕಾಗಿ 15 ಲಕ್ಷ ರೂ. ಪಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಮೊನಾಲಿಸಾ ಕುರಿತು ಹೀಗೊಂದು ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಬರಹಗಾರ ಹಾಗೂ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾಳ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಓಕೆ ಎಂದಿದ್ದಾರೆ.

ಇನ್ನೂ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್ ಆಗಿ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಳು.

Share This Article