– ಅಪಸ್ವರದಲ್ಲಿ ಹಾಡಿ ತಪ್ಪು ಮಾಡ್ದೆ ಅಂತ ಕಣ್ಣೀರಿಟ್ಟ ಕೆ.ಆರ್ ಪೇಟೆ ಹುಡುಗಿ
ʻಬಿರುಗಾಳಿʼ ಸಿನಿಮಾದ ʻಹೂವಿನ ಬಾಣದಂತೆ… ಯಾರಿಗೂ ಕಾಣದಂತೆ…ʼ ಹಾಡನ್ನ ತನ್ನದೇ ದಾಟಿಯಲ್ಲಿ ಹಾಡಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದ ಯುವತಿ ನಿತ್ಯಶ್ರೀಗೆ (NithyaShree) ಈಗ ಸಿನಿಮಾ ಆಫರ್ ಕೂಡ ಬಂದಿದೆಯಂತೆ.
ಒಂದಿಬ್ಬರು ನಿರ್ದೇಶಕರು ತಮ್ಮ ಸಿನಿಮಾದಲ್ಲಿ (Cinema) ನಟಿಸುವಂತೆ ಯುವತಿಯನ್ನ ಸಂಪರ್ಕಿಸಿದ್ದಾರಂತೆ. ಆದ್ರೀಗ ʻಒಳ್ಳೆಯ ಹಾಡನ್ನ ಅಪಸ್ವರದಲ್ಲಿ ಹಾಡಿ ತಪ್ಪು ಮಾಡಿಬಿಟ್ಟೆʼ ಅಂತ ಆಕೆಗೆ ಗಿಲ್ಟ್ ಕಾಡೋಕೆ ಶುರುವಾಗಿದೆ ಅಂತ ʻಪಬ್ಲಿಕ್ ಟಿವಿʼ ಜೊತೆ ಮಾತನಾಡ್ತಾ ಕಣ್ಣೀರಿಟ್ದಿದ್ದಾಳೆ. ಇದನ್ನೂ ಓದಿ: ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000
View this post on Instagram
ರಾತ್ರೋ ರಾತ್ರಿ ಸ್ಟಾರ್ ಆದ ಮಂಡ್ಯದ ಹುಡ್ಗಿ
ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದ ಸೇರಿದಂತೆ ಎಲ್ಲರ ಬಾಯಲ್ಲಿ ‘ಹೂವಿನ ಬಾಣದಂತೆ’ (Hoovina Banadanthe Viral Song) ಹಾಡು ಕೇಳಿಬರುತ್ತಿದೆ. ‘ಬಿರುಗಾಳಿ’ ಚಿತ್ರದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವಕ, ಯುವತಿಯರಂತೂ ಈ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ ಹಾಕಿ ರೀಲ್ಸ್ ಮಾಡೋಕೆ ಶುರು ಮಾಡಿದ್ದಾರೆ. ಈ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣ ಕೆ.ಆರ್ ಪೇಟೆ ಯುವತಿ ನಿತ್ಯಾಶ್ರೀ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ‘ಹೂವಿನ ಬಾಣದಂತೆ’ ಹಾಡು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇನ್‌ಸ್ಟಾದಲ್ಲಿ ನ್ಸ್ಟಾದಲ್ಲಿ ಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್
ನಿತ್ಯಶ್ರೀ ಯಾರು?
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ನಿತ್ಯಾಶ್ರೀ ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲೆಸಿದ್ದಾಳೆ. ಇದನ್ನೂ ಓದಿ: ಯಶ್ ತಾಯಿ ಪುಷ್ಪ ಅವರಿಗೂ ಈ ವೀಡಿಯೋ ತಲುಪಬೇಕು: ಪೇಮೆಂಟ್ ಆಗಿಲ್ಲ ಅಂತ ಕೊತ್ತಲವಾಡಿ ಸಿನಿಮಾ ಕಲಾವಿದ ಆರೋಪ