ನೆಲಮಂಗಲ: ಸಂಗೊಳ್ಳಿ ರಾಯಣ್ಣ ಕನ್ನಡಿಗ ಹಾಗೂ ಸ್ವಾತಂತ್ರ್ಯ ಹೋರಾಟಗಾರರು. ಅವರ ಪ್ರತಿಮೆ ಧ್ವಂಸ ಮಾಡುವುದು ದೇಶದ್ರೋಹ ಮಾಡಿದಂತೆ ಆಗುತ್ತದೆ. ಪ್ರತಿಮೆ ಧ್ವಂಸ ಮಾಡುವವರನ್ನು ದೇಶದ್ರೋಹಿಗಳೆಂದು ಕರೆದು ಕ್ರಮಕೈಗೊಳ್ಳಿ ಎಂದು ನಟ ವಿನೋದ್ ರಾಜ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಹೋರಾಟಗಾರರಿಗೆ ಬೆಂಬಲವನ್ನು ಸೂಚಿಸಿದರು. ಕನ್ನಡಿಗರು ದಂಗೆಗೆ ಮುಂದಾದರೆ ಏನಾಗುತ್ತದೆ ಎಂದು ಹಿರಿಯರು ಗೋಕಾಕ್ ಚಳುವಳಿಯಿಂದ ತೋರಿಸಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತೆ ಕೆಲವು ಕೆಲಸ ಆಗುತ್ತಿದೆ. ಅದನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಎಂಇಎಸ್ ಪುಂಡಾಟಿಕೆಯಿಂದ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಜನರನ್ನು ಬಲಿಪಶು ಮಾಡಿ ಹೋರಾಟ ಮಾಡುವ ಸಂಕಷ್ಟಕ್ಕೆ ಸರ್ಕಾರ ದೂಡುತ್ತಿದೆ. ಪ್ರತಿಮೆ ಧ್ವಂಸ, ಸರ್ಕಾರಿ ವಾಹನಗಳಿಗೆ ದಾಳಿ ಮಾಡುವ ಮಟ್ಟಕ್ಕೆ ಬಿಟ್ಟುಕೊಂಡಿರುವುದು ತಪ್ಪು. ಈ ಘಟನೆ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಿರುವುದು ತಿಳಿಯುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ
ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತೆ ಕೆಲಸವಾಗುತ್ತಿದೆ ಎಂದಾಗ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಿವಣ್ಣನವರ ಹೋರಾಟದ ಹಿಂದೆ ನಾವೆಲ್ಲ ಇರುತ್ತೇವೆ. ನಮ್ಮ ತಾಯಿ ಕೂಡ ಹೋರಾಟಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ