ಜೈಲಿನಲ್ಲಿ ದರ್ಶನ್ ನೋಡಿ ಮನಸ್ಸಿಗೆ ತುಂಬಾ ನೋವಾಯಿತು: ವಿನೋದ್ ರಾಜ್

Public TV
1 Min Read

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ರನ್ನು (Darshan) ನೋಡಲು ದಿನಕರ್ ತೂಗುದೀಪ್ ಕುಟುಂಬದ ಜೊತೆಯೇ ತೆರಳಿ ವಿನೋದ್ ರಾಜ್ (Vinod Raj) ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮಕ್ಕೆ ವಿನೋದ್ ರಾಜ್ ಮಾತನಾಡಿ, ದರ್ಶನ್‌ರನ್ನು ಜೈಲಿನಲ್ಲಿ ನೋಡಿ ಬೇಸರ ಆಯಿತು ಎಂದು ಮಾತನಾಡಿದ್ದಾರೆ.

ನನ್ನ ಮನೋಭಾವನೆಯಲ್ಲಿ ದರ್ಶನ್ ಒಬ್ಬ ಕಲಾವಿದ. ಬಂದ ತಕ್ಷಣ ನನ್ನನ್ನು ನೋಡಿ ತುಂಬಿಕೊಂಡರು. ಅದೇ ಪ್ರೀತಿ ಅದೇ ಆತ್ಮೀಯತೆಯಿಂದ ಮಾತನಾಡಿದರು. ಸ್ವೇಚ್ಚಾನುಸಾರವಾಗಿ ಓಡಾಡುತ್ತಿದ್ದ ಮನುಷ್ಯ ದರ್ಶನ್ ಅವರಾಗಿದ್ದರು. ದೇವರ ದಯೆಯಿಂದ ಎಲ್ಲಾ ಸರಿ ಹೋಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.

ದರ್ಶನ್ ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ತಂದೆ ತಾಯಿ ನೋವು ದೊಡ್ಡದು. ಆತನ ಹೆಂಡತಿ ಗರ್ಭದಲ್ಲಿರುವ ಮಗು ಎಲ್ಲವನ್ನು ನೆನೆಸಿಕೊಂಡರೆ ತುಂಬಾ ನೋವಾಗುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

ದರ್ಶನ್‌ರನ್ನು ನಂಬಿ ತಮ್ಮ ಸಿನಿಮಾಗೆ ಹಣ ಹಾಕಿದ ನಿರ್ಮಾಪಕರನ್ನು ನೋಡಿದರೆ ನೋವಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ನೋಡೋದು ಕಷ್ಟದ ಕೆಲಸ ಎಂದಿದ್ದಾರೆ. ಕಾರಾಗೃಹದಲ್ಲಿ ಅಷ್ಟು ದಿನಗಳ ಕಾಲ ಸಮಯ ಕಳೆಯೋದು ಸುಲಭವಲ್ಲ. ಅಣ್ಣಾ ಎಂದು ಬಾಯಿ ತುಂಬಾ ಹೇಳುವ ದರ್ಶನ್ ಹೀಗೆ ಆಯ್ತಲ್ಲ ನೋವು ಆಗ್ತಿದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.

Share This Article