‌ದರ್ಶನ್‌ ಪ್ರಕರಣ: ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು- ವಿನೋದ್‌ ಪ್ರಭಾಕರ್

Public TV
1 Min Read

ನ್ನಡದ ಸ್ಟಾರ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಜೈಲು ಸೇರಿದ್ದಾರೆ. ಇದೀಗ ಅವರನ್ನು ನಟ ವಿನೋದ್ ಪ್ರಭಾಕರ್ ಭೇಟಿಯಾಗಿ ಮಾತನಾಡಿಸಿ ಬಂದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು ಎಂದು ವಿನೋದ್ ಮಾತನಾಡಿದ್ದಾರೆ.

ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಹೀಗೆಲ್ಲಾ ಆಗಬಾರದಿತ್ತು. ನಿಮಗೆಲ್ಲಾ ಎಷ್ಟು ತಿಳಿದಿದೆಯೋ ನನಗೂ ಅಷ್ಟೇ ತಿಳಿದಿರೋದು. ನಾನು ದರ್ಶನ್ ಸರ್ ಅವರನ್ನು ಮೀಟ್ ಮಾಡದೇ 4 ತಿಂಗಳು ಆಗಿತ್ತು. ಅವರ ಹುಟ್ಟುಹಬ್ಬಕ್ಕೆ ಮೀಟ್ ಆಗಿದ್ದು ಆ ನಂತರ ಸುದ್ದಿ ನೋಡಿ ತಿಳಿಯಿತು ಎಂದು ದರ್ಶನ್ ಆಪ್ತ ನಟ ವಿನೋದ್ ಪ್ರಭಾಕರ್ (Vinod Prabhakar) ಮಾತನಾಡಿದ್ದಾರೆ.


ಅನ್ನಪೂರ್ಣೇಶ್ವರಿ ಠಾಣೆಯಲ್ಲಿದ್ದಾಗ ಭೇಟಿ ಮಾಡಲು ಪ್ರಯತ್ನಿಸಿದೆ ಆದರೆ ಅಂದು ಆಗಲಿಲ್ಲ. ಇದೀಗ ಅವರನ್ನು ಭೇಟಿಯಾದೆ. ಅಲ್ಲಿ ಏನೂ ಮಾತನಾಡಲು ಸಾಧ್ಯವಾಗಲಿಲ್ಲ. ಹ್ಯಾಂಡ್ ಶೇಕ್ ಮಾಡ್ವಿ. ಟೈಗರ್ ಅಂದ್ರು ಬಾಸ್ ಅಂತ ಕರೆದೆ ಅಷ್ಟೇ ಅಲ್ಲಿ ಮಾತನಾಡಿದ್ದು ಎಂದು ವಿನೋದ್ ತಿಳಿಸಿದರು.

ಕೆಲ ದಿನಗಳಿಂದ ನಾನು ನೋಡ್ತಿದ್ದೀನಿ. ದರ್ಶನ್ ಬಗ್ಗೆ ನಾನು ಏನು ಮಾತನಾಡ್ತಿಲ್ಲ. ಅವರ ಒಂದು ಪೋಸ್ಟ್ ಕೂಡ ಹಾಕ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ನಾನು ಪೋಸ್ಟ್ ಮಾಡಿ ಸಮಸ್ಯೆ ಬಗೆಹರಿಯೋದಾಗಿದ್ರೆ 1 ಲಕ್ಷ ಪೋಸ್ಟ್ ಮಾಡ್ತಿದ್ದೆ, ತನಿಖೆ ನಡೆಯುತ್ತದೆ. ಅವರಿಗೂ ಏನು ತೊಂದರೆಯಾಗಬಾರದು ಎಂದಿತ್ತು. ನನಗೆ ಇದರ ಬಗ್ಗೆ ಕ್ಲ್ಯಾರಿಟಿ ಇಲ್ಲ. ಭೇಟಿಯಾಗದೇ ಏನನ್ನೂ ಮಾತನಾಡಬಾರದು ಎಂದುಕೊಂಡಿದ್ದೆ ಎಂದು ವಿನೋದ್ ಮಾತನಾಡಿದರು. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ನ್ಯಾಯ ಸಿಗಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ.

Share This Article