ಭವಿಷ್ಯದ ಬಗ್ಗೆ ಖಚಿತವಿಲ್ಲ – 2032ರವರೆಗೆ ಆಡುವ ಸುಳಿವು ನೀಡಿದ ವಿನೇಶ್‌ ಫೋಗಟ್‌

By
1 Min Read

ನವದೆಹಲಿ: ವಿನೇಶ್‌ ಫೋಗಟ್‌ ಕುಸ್ತಿಗೆ ನಿವೃತ್ತಿ ಹೇಳಿದ್ದರೂ ಅವರು ಹಲವು ವರ್ಷಗಳ ಕಾಲ ಆಡುವ ಸಾಧ್ಯತೆಯಿದೆ. ಇಂದು ಭಾವನಾತ್ಮಕ ಪೋಸ್ಟ್‌ ಪ್ರಕಟಿಸಿ 2032ರವರೆಗೆ ಆಡುವ ಸುಳಿವು ನೀಡಿದ್ದಾರೆ.

ಫೈನಲ್‌ನಲ್ಲಿ ಅನರ್ಹಗೊಂಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ  ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ವಿನೇಶ್‌ ಫೋಗಟ್‌ ಅವರು ಭಾವನಾತ್ಮಕ ಪೋಸ್ಟ್‌ ಹಾಕಿದ್ದಾರೆ.


ಪೋಸ್ಟ್‌ನಲ್ಲಿ ಏನಿದೆ?
ಬಹುಶಃ ವಿಭಿನ್ನ ಸಂದರ್ಭಗಳಲ್ಲಿ, ನಾನು 2032 ರವರೆಗೆ ಆಡುವುದನ್ನು ನಾನು ನೋಡಬಹುದು. ಏಕೆಂದರೆ ನನ್ನಲ್ಲಿನ ಹೋರಾಟ ಮತ್ತು ನನ್ನಲ್ಲಿನ ಕುಸ್ತಿ ಯಾವಾಗಲೂ ಇರುತ್ತದೆ. ನನಗೆ ಭವಿಷ್ಯ ಏನಾಗುತ್ತದೆ ಮತ್ತು ಮುಂದಿನ ಈ ಪ್ರಯಾಣದಲ್ಲಿ ನನಗೆ ಏನು ಕಾಯುತ್ತಿದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ್ದಕ್ಕಾಗಿ ಮತ್ತು ಸರಿಯಾದ ವಿಷಯಕ್ಕಾಗಿ ನಾನು ಯಾವಾಗಲೂ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.

Share This Article