ಯಾವುದೇ ಬೆಂಬಲವನ್ನು ನೀಡಿಲ್ಲ- ಪಿ.ಟಿ.ಉಷಾ ವಿರುದ್ಧ ಫೋಟೋ ಕ್ಲಿಕ್ಕಿಸಿದ ಬಗ್ಗೆ ಫೋಗಟ್ ಕಿಡಿ

Public TV
1 Min Read

ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆ ಪಿ.ಟಿ.ಉಷಾರವರು ನನ್ನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಆ ಸಮಯದಲ್ಲಿ ಒಂದು ಫೋಟೋವನ್ನು ನನಗೆ ಗೊತ್ತಾಗದೇ ತೆಗೆಯಲಾಗಿದೆ. ಅದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕಂಡಿದ್ದಾರೆ. ಅವರು ನನಗೆ ಯಾವುದೇ ಬೆಂಬಲವನ್ನು ನೀಡಲಿಲ್ಲ. ರಾಜಕೀಯ ನಡೆಸುತ್ತಿದ್ದಾರೆ ಎಂದು ವಿನೇಶ್ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಅವರು, ನಾನು ಯಾತಕ್ಕಾಗಿ ಕುಸ್ತಿಯನ್ನು ಮುಂದುವರಿಸಬೇಕು? ಎಲ್ಲಾ ಕಡೆಯಲ್ಲೂ ರಾಜಕೀಯ ನಡೆಯುತ್ತಿದೆ. ಒಲಿಂಪಿಕ್ಸ್ ನಲ್ಲಿಯೂ ಅದೇ ರೀತಿ ಆಗಿತ್ತು. ಅನೇಕರು ನನ್ನನ್ನು ಕುಸ್ತಿಯಿಂದ ಹಿಂಜರಿಬೇಡ ಎಂದು ಹೇಳುತ್ತಾರೆ. ಆದರೆ ನಾನೇ ಬೇಡ ಎಂದು ವಿದಾಯ ಹೇಳಿದ್ದೇನೆ ಎಂದರು.

ಒಲಿಂಪಿಕ್ಸ್ ನಲ್ಲಿ ಫೈನಲ್ ಹಂತದಲ್ಲಿ ನಿಯಮಕ್ಕಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ತೀವ್ರ ಆಘಾತಕ್ಕೀಡಾದ ವಿನೇಶ್ ಕುಸ್ತಿಗೆ ವಿದಾಯವನ್ನು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸೇರ್ಪಡೆಯಾಗಿದ್ದಾರೆ,

ಇದೀಗ ಕುಸ್ತಿಗೆ ವಿದಾಯ ಹೇಳಿ, ರೈಲ್ವೇ ಇಲಾಖೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಶೀಘ್ರದಲ್ಲೇ ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

Share This Article