ವಿನಯ್‌ ಸೋಮಯ್ಯ ಯಾರು ಅನ್ನೋದೆ ಗೊತ್ತಿಲ್ಲ: ಶಾಸಕ ಪೊನ್ನಣ್ಣ

Public TV
1 Min Read

ಬೆಂಗಳೂರು: ನನಗೂ ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ (Ponnanna) ಹೇಳಿದ್ದಾರೆ.

ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಣ್ಣ (Vinay Somaiah) ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಮೃತ ವ್ಯಕ್ತಿ ಯಾರು ಎನ್ನುವುದೇ ಗೊತ್ತಿಲ್ಲ. ನಾನು ಯಾವುದೇ ಕಿರುಕುಳ ನೀಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ ನೇಣಿಗೆ ಶರಣು

ಬಿಜೆಪಿಯವರಿಗೆ (BJP) ಮಾಡಲು ಕೆಲಸ ಇಲ್ಲ. ಬಿಜೆಪಿಯವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ವಿಚಾರ ಇಲ್ಲ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಾಗುತ್ತಿದ್ದು ಬಿಜೆಪಿಯವರು ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾವುದೇ ಟೀಕೆ ಬಂದರೂ ನಾನು ದೂರು ನೀಡಿಲ್ಲ. ದೂರು ನೀಡುವಂತೆ ಯಾರಿಗೂ ಹೇಳಿಲ್ಲ ಎಂದು ತಿಳಿಸಿದರು.

ಡೆತ್‌ನೋಟ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿದೆ ಎಂಬ ಪ್ರಶ್ನೆಗೆ, ವಾಟ್ಸಪ್‌ನಲ್ಲಿ ಬಂದಿರುವುದನ್ನು ನಂಬಲು ಸಾಧ್ಯವಿಲ್ಲ. ನಾನು ಪೊಲೀಸ್‌ ಪೇದೆಗೆ ಹೇಳಲು ಆಗುತ್ತಾ? ಯಾರಿಗೂ ನಾನು ಹೇಳಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು

ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದಕ್ಕೆ ಮನನೊಂದು ವಿನಯ್‌ ಸೋಮಯ್ಯ ಬೆಂಗಳೂರಿನಲ್ಲಿ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಎ ಎಸ್ ಪೊನ್ನಣ್ಣ, ಮಡಿಕೇರಿಯ ಶಾಸಕ ಮಂಥರ್‌ ಗೌಡ ಮತ್ತು ತೆನ್ನೀರ ಮಹೀನಾ ಹೆಸರನ್ನು ಉಲ್ಲೇಖಿಸಿದ್ದಾರೆ.

 

Share This Article