ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

Public TV
1 Min Read

ಚ್ಚು ಹಿಡಿದು ರೀಲ್ಸ್ ಮಾಡಿದಕ್ಕೆ ಬಂಧನಕ್ಕೊಳಗಾಗಿರುವ ವಿನಯ್ (Vinay Gowda) ಮತ್ತು ರಜತ್‌ರನ್ನು (Rajath) ಬಸವೇಶ್ವರ ನಗರದ ಪೊಲೀಸರು ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇದನ್ನೂ ಓದಿ:ರೀಲ್ಸ್‌ ವಿವಾದ: ಬಿಡುಗಡೆಯಾಗಿದ್ದ ರಜತ್‌, ವಿನಯ್‌ರನ್ನು ಮತ್ತೆ ಬಂಧಿಸಿದ ಪೊಲೀಸರು

ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸುವಾಗ ಯಾವ ಜಾಗದಲ್ಲಿ ವಿಡಿಯೋ ಮಾಡಿದ್ದು? ನಿಮಗೆ ಮಚ್ಚು ಕೊಟ್ಟೋರು ಯಾರು? ಅನ್ನೋದನ್ನು ವಿನಯ್ ಮತ್ತು ರಜತ್‌ರಿಂದ ಕೇಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ, ಮಹಜರಿನ ದೃಶ್ಯವನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಮಹಜರಿನ ಬಳಿಕ ರೀಲ್ಸ್‌ಗೆ ಬಳಸಿದ್ದ ಲಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಕೋರ್ಟ್‌ಗೆ ಇಬ್ಬರನ್ನೂ ಹಾಜರು ಪಡಿಸಲಿದ್ದಾರೆ.

Share This Article