5 ಶಾಸಕರು, 3 ಸಚಿವರಿರುವ ದಕ್ಷಿಣ ಕನ್ನಡಕ್ಕೆ ಬೊಮ್ಮಾಯಿ ಬಜೆಟ್‍ನಲ್ಲಿ ಕೊಟ್ಟಿದ್ದೇನು: ಸೊರಕೆ ಪ್ರಶ್ನೆ

Public TV
2 Min Read

ಉಡುಪಿ: 5 ಶಾಸಕರು ಇಬ್ಬರು ಪ್ರಭಾವಿ ಸಚಿವರು ಒಬ್ಬರು ಕೇಂದ್ರ ಸಚಿವೆ, ರಾಷ್ಟ್ರಮಟ್ಟದ ಪ್ರಭಾವಿ ನಾಯಕ ಬಿ.ಎಲ್ ಸಂತೋಷ್ ಇರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಸರ್ಕಾರ ಬಜೆಟ್‍ನಲ್ಲಿ ಕೊಟ್ಟಿದ್ದೇನು? ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೊರಕೆ, ಕರಾವಳಿ ಭಾಗದಲ್ಲಿ ಅಭಿವೃದ್ಧಿಗೆ ಒತ್ತು ಕೊಟ್ಟರೆ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ. ಭಾವನಾತ್ಮಕ ವಿಚಾರಗಳೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಶ್ರೀರಕ್ಷೆ ಎಂದು ಗೊತ್ತಿದ್ದು ಸಿಎಂ ಬೊಮ್ಮಾಯಿ ಬಜೆಟ್‍ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ವ್ಯಂಗ್ಯದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಕಾಶಿ ಯಾತ್ರೆ ಕೈಗೊಳ್ಳುವವರಿಗೆ 5 ಸಾವಿರ ರೂ.ಸಹಾಯಧನ

ಬಜೆಟ್‍ನಲ್ಲಿ ಉಡುಪಿಯನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಲಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜನ ಗೊಳಿಸುವ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಬಜೆಟ್ ಗಾತ್ರ ಶೇಕಡ ಹೆಚ್ಚಾಗಿದೆ. ಎಷ್ಟು ಸಾಲ ಪಡೆದು ಬಜೆಟ್ ಮಂಡಿಸಬಹುದೋ ಅದೆಲ್ಲವನ್ನು ಬಸವರಾಜ ಬೊಮ್ಮಾಯಿ ಬಳಸಿಕೊಂಡಿದ್ದಾರೆ. ಹಿಂದಿನ ಸರ್ಕಾರವು ಈ ಪ್ರಯೋಜನ ಬಳಸಿಕೊಂಡಿದೆ ಆದರೆ ಬೊಮ್ಮಾಯಿಯಷ್ಟು ಅಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ? – ಯಾವ ವಲಯಕ್ಕೆ ಎಷ್ಟು ಕೋಟಿ?

ರಾಜ್ಯ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತದೆ. ಕೇಂದ್ರ ಸರ್ಕಾರದಿಂದ ಬರುವ ಯೋಜನೆ ಹಣವನ್ನು ಇಟ್ಟುಕೊಂಡು ಬಜೆಟ್ ಗಾತ್ರವನ್ನು ಹಿಗ್ಗಿಸಲಾಗಿದೆ. ಕೇಂದ್ರದಿಂದ ನಮಗೆ ಸಹಜವಾಗಿ ಬರಬೇಕಾದ ನಮ್ಮ ಹಕ್ಕು ಜಿಎಸ್‍ಟಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಎಲ್ಲಾ ಇಲಾಖೆಗಳಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ ಏನು ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

ನಾರಾಯಣ ಗುರು ನಿಗಮ ಆಗಬೇಕು ಎಂಬ ಬೇಡಿಕೆ ಇತ್ತು. ನಿಗಮ ಮಾಡಿಯೇ ಮಾಡುತ್ತೇವೆ ಎಂಬ ಅಭಿಪ್ರಾಯಗಳು ಬಿಜೆಪಿ ಕಡೆಯಿಂದ ಕೇಳಿಬರುತ್ತಿತ್ತು. ನಿಗಮದ ಬೇಡಿಕೆ ಇರುವಾಗ ನಾಲ್ಕು ವಸತಿ ಶಾಲೆಗಳು ಮಾತ್ರ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರಿಗೆ 100 ಕೋಟಿ ರೂಪಾಯಿ ಕೊಟ್ಟಿದ್ದರು. ಬಿಜೆಪಿ ಎಲ್ಲಾ ಅನುದಾನವನ್ನು ಕಡಿತ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *