Bigg Boss: You Please Shut Up- ಸಂಗೀತಾಗೆ ವಿನಯ್ ಆವಾಜ್

Public TV
2 Min Read

ಬಿಗ್ ಬಾಸ್ ಮನೆಯ (Bigg Boss Kannada 10) ಆಟ 60ನೇ ದಿನದತ್ತ ಮುನ್ನುಗ್ಗತ್ತಿದ್ದರೂ ‘ಬಳೆ’ ರಗಳೆ ಮಾತ್ರ ನಿಂತಿಲ್ಲ. ಅದ್ಯಾವಾಗ ಗಳಿಗೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಪವಿ ಮನೆಗೆ ಬಂದ್ರೋ, ವಿನಯ್ ಬಳೆ ಮ್ಯಾಟರ್ ಟ್ರೋಲ್ ಆಗಿರೋದು ಗೊತ್ತಾಯಿತ್ತೋ. ಮತ್ತೆ ಈ ವಿಚಾರವಾಗಿ ಸಂಗೀತಾ ಮತ್ತು ವಿನಯ್ ನಡುವೆ ವಾಗ್ದಾಳಿ ಶುರುವಾಗಿದೆ. ಇದೀಗ ಬಿಗ್ ಬಾಸ್‌ನಲ್ಲಿ ನಡೆಯುತ್ತಿರೋ ನೆಗೆಟಿವಿಗೆ ಬೀಜನೇ ನೀನು ಶಟಪ್ ಎಂದು ವಿನಯ್ (Vinay Gowda) ಗುಡುಗಿದ್ದಾರೆ. ಇದನ್ನೂ ಓದಿ:‘ಅನಿಮಲ್’ ಗೆಲುವು, ಪಾರ್ಟ್ 2 ಮಾಡ್ತಾರಾ ನಿರ್ದೇಶಕ ವಂಗ?

ದೊಡ್ಮನೆಯಲ್ಲಿ ಹೀಗೊಂದು ಫ್ಲವರ್ ವರ್ಸಸ್ ಫೈಯರ್ ಟೆಸ್ಟ್ ನಡೆದಿದೆ. ಇದರ ಪರಿಣಾಮವಾಗಿ ವಿನಯ್-ಸಂಗೀತಾ ಮಧ್ಯ ಮತ್ತೆ ಹಳೆಯ ಕಿಡಿ ಹೊತ್ತಿಕೊಂಡಿರುವಂತಿದೆ. ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದು ಟಾಸ್ಕ್‌ವೊಂದನ್ನ ನೀಡಿದ್ದಾರೆ. ಒಂದಿಷ್ಟು ಬಿಳಿ ಮತ್ತೊಂದಿಷ್ಟು ಕಪ್ಪು ಹೂಗಳನ್ನು ನೀಡಿದ್ದು, ಒಬ್ಬೊಬ್ಬ ಸದಸ್ಯನೂ, ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಪಾಸಿಟಿವ್ ವ್ಯಕ್ತಿ ಯಾರು ಎಂದು ಆರಿಸಿ ಅವರಿಗೆ ಬಿಳಿ ಹೂವು ನೀಡಬೇಕು. ಹಾಗೆಯೇ ಯಾರು ಅತ್ಯಂತ ನೆಗೆಟಿವ್ ವ್ಯಕ್ತಿ ಯಾರು ಆರಿಸಿ ಅವರಿಗೆ ಕಪ್ಪು ಹೂವು ನೀಡಬೇಕು. ಇದನ್ನೂ ಓದಿ:Bigg Boss: ಆಟ ಆಡೋಕೆ ಲಾಯಕ್ಕಿಲ್ಲ- ಸ್ನೇಹಿತ್‌ಗೆ ಕಾರ್ತಿಕ್ ಧಮಕಿ

ಈ ಟಾಸ್ಕ್‌ನಲ್ಲಿ ಕಪ್ಪು ಹೂವು ಸಂಗೀತಾಯಿಂದ ಪಡೆದಿರುವ ವಿನಯ್ ಕಣ್ಣುಗಳಲ್ಲಿ ಅಸಮಧಾನದ ಹೊಗೆ ಎದ್ದಿದೆ. ಅದರಲ್ಲಿ ಸಂಗೀತಾ- ವಿನಯ್ ಪರಸ್ಪರ ಕಪ್ಪು ಹೂವು ನೀಡಿ, ಮೊದಲಿಂದಾನೂ ನೆಗೆಟಿವಿಟಿಯ ರೂಟೇ ನೀವು ಎಂದು ವಿನಯ್ ವಿರುದ್ಧ ಸಂಗೀತಾ ಧ್ವನಿ ಎತ್ತಿದ್ದರೆ, ನಾನು ನೆಗೆಟಿವಿಟಿಗೆ ಬೇರು ಅಲ್ವಾ ಆದರೆ ಆ ಬೇರು ಬಿಡಬೇಕು ಅಂದ್ರೆ ಅದಕ್ಕೊಂದು ಬೀಜ ನೆಡಬೇಕಲ್ವಾ? ಆ ಬೀಜವೇ ಸಂಗೀತಾ. ಈ ಮನೆಯಲ್ಲಿ ಯಾರ್ ಯಾರ್ ತಲೆಯಲ್ಲಿ ನೆಗೆಟಿವಿಟಿ ಅನ್ನೋ ಬೀಜ ಇದ್ಯೋ, ಅದನ್ನ ನೆಟ್ಟಿರೋದೇ ಸಂಗೀತಾ ಎಂದು ವಿನಯ್ ತಿರುಗೇಟು ನೀಡಿದ್ದಾರೆ.

ಈ ವೇಳೆ ಮತ್ತೆ ಬಳೆ ಮ್ಯಾಟರ್ ತೆಗೆದು ಇಲ್ಲದಿರೋ ಕಾರಣಕ್ಕೆ ಸಂಗೀತಾ (Sangeetha) ಮೂಗು ತೂರಿಸಿ ಅದನ್ನ ಚಳುವಳಿ ಮೂಮೆಂಟ್ ಮಾಡಿದ್ದರು. ಆಗ ಮಾತಿಗೆ ಸಂಗೀತಾ, ಇವತ್ತಿಗೂ ನಾನದಕ್ಕೆ ಸ್ಟ್ಯಾಂಡ್ ತಗೊತೀನಿ ಎಂದಿದ್ದಾರೆ. ವಿನಯ್, ಯು ಪ್ಲೀಸ್ ಶಟ್ ಅಪ್ ಎಂದು ಕೋಪದಿಂದ ಹೇಳಿದ್ದಾರೆ. ಸಂಗೀತಾ ಕೂಡ ಸುಮ್ಮನಿರದೆ, ಮೈಂಡ್ ಯುವರ್ ಲ್ಯಾಂಗ್ವೇಜ್ ಎಂದು ತಿರುಗಿಸಿ ಉತ್ತರ ನೀಡಿದ್ದಾರೆ. ನೀನು ಸ್ಟಾö್ಯಂಡ್ ಆದ್ರೂ ತಗೋ ಪಲ್ಟಿ ಆದ್ರೂ ಹೊಡಿ ನನಗೆ ಬೇಕಿಲ್ಲ ಎಂದು ಮಾತಿನಲ್ಲೇ ತಿವಿದಿದ್ದಾರೆ.

ಬಳೆ ವಿಚಾರ ಮತ್ತೆ ಮಾತನಾಡೋದು ತಪ್ಪು ವಿನಯ್. ಯಾರೋ ಬಂದು ಹೇಳಿದ ಮೇಲೆ ಮತ್ತೆ ದ್ವೇಷ ಸಾಧಿಸೋದು ಅಲ್ಲ ಎಂದು ಸಂಗೀತಾ ಕೂಡ ಖಡಕ್ ಆಗಿ ಉತ್ತರ ಕೊಟ್ಟರು. ಕ್ಯಾರೆ ಎನ್ನದೇ ಮಾತು ಮುಂದುವರಿಸಿ, ಪ್ರತಿಯೊಂದು ನೆಗೆಟಿವಿಟಿ ಬೀಜಕ್ಕೂ ಸಂಗೀತಾನೇ ಮೂಲ ಕಾರಣ ಅಂತ ಹೇಳುತ್ತಾ ಈ ಕಪ್ಪು ರೋಸ್ ಅವರಿಗೆ ಕೊಡುತ್ತೇನೆ ಎಂದು ವಿನಯ್ ಠಕ್ಕರ್ ಕೊಟ್ಟಿದ್ದಾರೆ.

ಆರಂಭದ ದಿನಗಳಲ್ಲಿ ಬೆಂಕಿಯಾಗಿ ಹೊತ್ತಿಕೊಂಡಿದ್ದ ವಿನಯ್-ಸಂಗೀತಾ ಮನಸ್ತಾಪ ನಂತರ ತಣ್ಣಗಾಗಿತ್ತು. ವಿನಯ್ ತಂಡವನ್ನು ಸೇರಿಕೊಂಡಿದ್ದ ಸಂಗೀತಾ ಅವರನ್ನು ಹೊಗಳಿದ್ದರು ಕೂಡ. ಆದರೆ ಮತ್ತೆ ಈಗ ಅವರ ಮಧ್ಯೆ ಕಿಡಿ ಹೊತ್ತಿಕೊಂಡಿದೆ.

Share This Article