ಬಳ್ಳಾರಿ: ವಿಜಯನಗರ ಜಿಲ್ಲೆಯಲ್ಲಿ ಧರ್ಮಸ್ಥಳ (Dharmasthala) ಸಂಘದ ವಿರುದ್ದ ಪ್ರಚಾರಕ್ಕೆ ಹೋಗಿದ್ದ ಗಿರೀಶ್ ಮಟ್ಟಣ್ಣನವರ್ (Girish Mattannavar) ಮತ್ತು ಗ್ಯಾಂಗ್ ಸದಸ್ಯರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಏಳು ತಿಂಗಳ ಹಿಂದೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಧರ್ಮಸ್ಥಳ ಸ್ವಸಹಾಯ ಸಂಘದ (Self Help Groups) ವಿರುದ್ದ ಪಿತೂರಿ ಮಾಡಲು ಹೋಗಿದ್ದ ಮಟ್ಟಣ್ಣನವರ್ ಆ್ಯಂಡ್ ಟೀಂ, ಗ್ರಾಮಕ್ಕೆ ಎಂಟ್ರಿ ಆಗುತ್ತಿದ್ದಂತೆ ಜನ ತರಾಟೆ ತಗೊಂಡಿದ್ದರು. ಇದನ್ನೂ ಓದಿ:AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್
ಮಹಿಳೆಯರು ಹಾಗೂ ಪುರುಷರು ಮಟ್ಟಣ್ಣನವರನ್ನ ಸುತ್ತುವರೆದು, ನಮ್ಮೂರಿನಲ್ಲಿ ಧರ್ಮಸ್ಥಳ ಸಂಘದಿಂದ ಯಾವುದೇ ಸಮಸ್ಯೆ ಆಗಿಲ್ಲ. ನಮಗೆ ಬೇಕಾದಾಗ ಸಾಲ ಕೊಟ್ಟಿದ್ದಾರೆ. ನಾವು ಸರಿಯಾಗಿ ಕಟ್ತಿದ್ದೇವೆ. ನಿಮಗೆ ಧರ್ಮಸ್ಥಳ ಸಂಘದಿಂದ ಅನ್ಯಾಯ ಆಗಿದೆ ಎಂದು ಹೇಳಿದವರು ಯಾರು ಕರೆಸಿ. ಸುಮ್ನೆ ನಮ್ಮೂರಿಗೆ ಬಂದು ಸಮಸ್ಯೆ ಮಾಡಬೇಡಿ. ಕೂಡಲೇ ಇಲ್ಲಿಂದ ವಾಪಾಸ್ ಹೋಗಿ ಎಂದು ಮಹಿಳೆಯರು ಹಾಗೂ ಪುರುಷರು ತರಾಟೆ ತಗೊಂಡಿದ್ದರು.
ತರಾಟೆಯ ಬೆನ್ನಲ್ಲೇ ಬಂದ ದಾರಿಗೆ ಸುಂಕ ಇಲ್ಲ ಎನ್ನಹವಂತೆ ಗಿರೀಶ್ ಮಟ್ಟಣ್ಣನವರ್ ಆ್ಯಂಡ್ ಟೀಂ ಗ್ರಾಮದಿಂದ ಕಾಲ್ಕಿತ್ತಿದ್ದರು.