ಮೈಸೂರು: ಮನುಷ್ಯ ಸಾವನ್ನಪ್ಪಿದರೆ ತಿಥಿ ಮಾಡುವುದು ಸಾಮಾನ್ಯ, ಆದರೆ ಜಿಲ್ಲೆಯ ಗ್ರಾಮಸ್ಥರು ಕೋತಿಯೊಂದರ ತಿಥಿ ಮಾಡಿ ಸುದ್ದಿಯಾಗಿದ್ದಾರೆ.
ಇದೇನಪ್ಪಾ! ಕೋತಿಗೆ ತಿಥಿಯಾ ಎಂದು ಹುಬ್ಬೇರಿಸಬೇಡಿ. ಹೌದು ಇದು ಆಶ್ಚರ್ಯ ಅನಿಸಿದರೂ ಅಕ್ಷರಶಃ ಸತ್ಯ. ಕೆಆರ್ ನಗರದ ಚುಂಚನಕಟ್ಟೆ ಗ್ರಾಮದಲ್ಲಿ ಜೂನ್ 26 ರಂದು ಆದಿಚುಂಚನಗಿರಿ ಶಾಲೆ ಸಮೀಪದ ವಿದ್ಯುತ್ ಕಂಬದಲ್ಲಿ ಕೋತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿತ್ತು.
ಸಾವನ್ನಪ್ಪಿದ್ದ ಆ ಕೋತಿಗೆ ಗ್ರಾಮಸ್ಥರು ಸೇರಿಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಮನುಷ್ಯ ತೀರಿಹೋದಾಗ ನಡೆಸುವ ಅಂತ್ಯ ಸಂಸ್ಕಾರದಂತೆ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು.
ಇಂದು ಗ್ರಾಮಸ್ಥರೆಲ್ಲರೂ ಸೇರಿ ಕೋತಿಗೆ ತಿಥಿಯನ್ನೂ ಮಾಡಿದ್ದಾರೆ. ಕೋತಿಯ ಸಮಾಧಿಗೆ ಹಾಲು ತುಪ್ಪ ಬಿಟ್ಟ ಗ್ರಾಮಸ್ಥರು, ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಹಾಗೂ ಹಣ್ಣು ಹಂಪಲುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಅನ್ನ ಸಂತರ್ಪಣೆ ಕೂಡ ಮಾಡಿದ್ದಾರೆ.
https://www.youtube.com/watch?v=2UQoFXMa-H0