ಹನೂರು ಶಾಸಕರೇ ಇತ್ತ ನೋಡಿ, ಡೋಲಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಬೆಟ್ಟಗುಡ್ಡ ಹತ್ತಿ ಇಳಿಯುತ್ತಿದ್ದಾರೆ ಜನ!

Public TV
1 Min Read

ಚಾಮರಾಜನಗರ: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ರಸ್ತೆ ಸಂಪರ್ಕವಿಲ್ಲದೆ ಜನರು ರೋಗಿಗಳನ್ನು ಡೋಲಿ ಮೂಲಕ 15 ಕಿ.ಮೀ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ.

ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಜನರಿಗೆ ಸರಿಯಾದ ಮೂಲಸೌಕರ್ಯವಿಲ್ಲ. ಇಲ್ಲಿನ ಗ್ರಾಮಸ್ಥರು ಆಸ್ಪತ್ರೆಗೆ ಬರಬೇಕಾದರೆ ಕಾಡು ಪ್ರಾಣಿಗಳ ಹಾವಳಿಯ ಮಧ್ಯ ಡೋಲಿ ಮೂಲಕ ರೋಗಿಯನ್ನು ಹತ್ತಾರು ಕಿ.ಮೀ ಹೊತ್ತು ತರಬೇಕು. ಅದರಲ್ಲೂ ಈ ಗ್ರಾಮದ ಗರ್ಭಿಣಿಯರ ಪಾಡು ಹೇಳತೀರದು.

ಹನೂರು ವಿಧಾನಸಭಾ ಕ್ಷೇತ್ರಕ್ಕೆ ಇಂಡಿಗನತ್ತ ಗ್ರಾಮ ಸೇರುತ್ತದೆ. ಇಲ್ಲಿನ ಶಾಸಕರು ಗ್ರಾಮಕ್ಕೆ ಮೂಲಸೌಕರ್ಯವನ್ನು ಒದಗಿಸಿಕೊಟ್ಟಿಲ್ಲ. ಈ ಕುರಿತು ಶಾಸಕರು ಗಮನಹರಿಸಬೇಕು ಎಂದು ಶಾಸಕರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಕಾವೇರಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇಂಡಿಗನತ್ತ ಗ್ರಾಮವು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದ ನಮಗೆ ಆ ಪ್ರದೇಶದಲ್ಲಿ ಅಭಿವೃದ್ಧಿ ಮಾಡಲು ಸ್ವಲ್ಪ ಕಷ್ಟವಾಗುತ್ತದೆ. ಆದ್ರು ಅರಣ್ಯಾಧಿಕಾರಗಳ ಜೊತೆ ಮಾತನಾಡಿ ಇಂಡಿಗನತ್ತ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಸಿಕೊಡಲು ಅನುಮತಿ ಪಡೆದು ಗ್ರಾಮವನ್ನು ಅಭಿವೃದ್ಧಿ ಮಾಡ್ತೇವೆ. ಚಾಮರಾಜನಗರದಲ್ಲಿ ಬಹುತೇಕ ಗ್ರಾಮಗಳು ಕಾಡಂಚಿನಲ್ಲಿದೆ. ಇಂತಹ ಪ್ರದೇಶಗಳಲ್ಲಿ ಅಭಿವೃದ್ಧಿ ಮಾಡಲು ಸಾದ್ಯವಾಗದಿದ್ದರೆ ಈ ಭಾಗದ ಜನರಿಗೆ ಬೇರೆ ಕಡೆಯಲ್ಲಿ ವಸತಿ ಕಲ್ಪಸಿಕೊಡುತ್ತೇವೆ. ಹಾಗೇ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯವನ್ನು ಮಾಡಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *