ಒಂದೇ ಗ್ರಾಮದ 51 ಜನರಿಗೆ ಕೊರೊನಾ ಪಾಸಿಟಿವ್- ಗ್ರಾಮಸ್ಥರಲ್ಲಿ ಆತಂಕ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದರೂ, ಇಲ್ಲೊಂದು ಗ್ರಾಮದಲ್ಲಿ 51 ಜನರಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಈ ಮೂಲಕ ಇಡೀ ಗ್ರಾಮ ಸೀಲ್ ಡೌನ್ ಆಗುವಂತಾಗಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಜನಗೇರಿಯಲ್ಲಿ 25 ಕ್ಕೂ ಹೆಚ್ಚು ಕುಟುಂಬಗಳ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಷ್ಟಕ್ಕೂ ಕಾಫಿತೋಟ ಬಿಟ್ಟು ಎಲ್ಲೂ ಹೊರ ಹೋಗದೆ, ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಜನರಿಗೆ ಸೋಂಕು ಹರಡಿರುವುದೇ ಅಚ್ಚರಿಯ ವಿಷಯವಾಗಿದೆ. ಆದರೆ ಬೆಟ್ಟಗೇರಿ ಕಾಫಿ ಎಸ್ಟೇಟ್ ನಲ್ಲಿರುವ ಬಿಜನಮೊಟ್ಟೆ ಬ್ರಾಂಚಿನಲ್ಲಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಹರಡಿತ್ತು. ಮಡಿಕೇರಿಯ ಕಾಲೇಜಿಗೆ ಹೋಗುತ್ತಿದ್ದವರಿಗೆ ಮೊದಲು ಸೋಂಕು ಕಂಡುಬಂದಿತ್ತು. ಬಳಿಕ ಬಿಜನಮೊಟ್ಟೆ ಎಸ್ಟೇಟ್ ಗೆ ಕೂಲಿ ಕೆಲಸಕ್ಕೆ ಹೋಗಿದ್ದ 15 ಮಂದಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು. ಇವರೆಲ್ಲರಿಗೂ ಸೋಂಕಿನ ಲಕ್ಷಣಗಳಿದ್ದರೂ ಇತ್ತೀಚೆಗೆ ಗ್ರಾಮದಲ್ಲಿ ಮೃತಪಟ್ಟಿದ್ದ ವೃದ್ದರೊಬ್ಬರ ಸಾವಿಗೆ ಹೋಗಿದ್ದಾರೆ. ಇದರಿಂದಾಗಿ ಗ್ರಾಮದ 51 ಜನರಿಗೆ ಸೋಂಕು ವ್ಯಾಪಿಸಿದೆ. ಇದನ್ನೂ ಓದಿ: ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

ವಿದ್ಯಾರ್ಥಿಗಳಿಗೆ ಮೊದಲು ಪಾಸಿಟಿವ್ ಬಂದ ಪರಿಣಾಮವಾಗಿ ಅನುಮಾನಗೊಂಡು ಅಂಜನಗೇರಿಯ 300 ಕ್ಕೂ ಹೆಚ್ಚು ಜನರಿಗೆ ಕೋವಿಡ್ ತಪಾಸಣೆ ಮಾಡಿದ್ದಾರೆ. ಈ ವೇಳೆ 51 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದ ಸೋಂಕಿತರೆಲ್ಲರೂ ಆರೋಗ್ಯವಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಇದನ್ನೂ ಓದಿ: ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

Share This Article
Leave a Comment

Leave a Reply

Your email address will not be published. Required fields are marked *