ಖೋ ಖೋ ಪಂದ್ಯಾಟಕ್ಕೆ ಕಿರಿಕ್‌ – ಶಾಲಾ ಆವರಣದಲ್ಲಿ ಡ್ರ್ಯಾಗರ್‌, ಚಾಕು ಹಿಡಿದ ಪುಂಡರು

By
1 Min Read

ಬೆಂಗಳೂರು: ಶಾಲೆಯಲ್ಲಿ (School) ನಡೆಯುತ್ತಿದ್ದ ಖೋ ಖೋ ಪಂದ್ಯಾಟದ (Kho Kho Tournament) ವೇಳೆ ಪುಡಿ ಪುಂಡರು ನಶೆ ಏರಿಸಿಕೊಂಡು ಕೈಯಲ್ಲಿ ಡ್ರ್ಯಾಗರ್‌ ಹಿಡಿದು ಅಟ್ಟಹಾಸ ಮೆರೆದ ಘಟನೆ ಕೊತ್ತನೂರು ಬಳಿ ನಡೆದಿದೆ.

ಮಂಗಳವಾರ ಸೊಣ್ಣಪ್ಪನಹಳ್ಳಿ ಶಿವಾಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ್‌ ಶಾಲಾ ಖೋ ಖೋ ಪಂದ್ಯಾಟ ಆಯೋಜನೆಗೊಂಡಿತ್ತು. ಈ ವೇಳೆ ತೀರ್ಪುಗಾರ ತಪ್ಪು ತೀರ್ಪು ನೀಡಿದ್ದಾರೆ ಎಂದು ಆರೋಪಿಸಿ ಸೊಣ್ಣಪ್ಪನಹಳ್ಳಿ ಹುಡುಗರು ಕಿರಿಕ್‌ ಮಾಡಿದ್ದಾರೆ. ಈ ವೇಳೆ ಪವನ್ , ಸುದೀಪ್ ಹಾಗೂ ಇತರರು ಏಕಾಏಕಿ ತೀರ್ಪುಗಾರರ ಮೇಲೆ ಮುಗಿಬಿದ್ದಿದ್ದಾರೆ. ಪಂದ್ಯದ ವೇಳೆ ಇವೆಲ್ಲ ಮಾಮೂಲಿ ಎಂದುಕೊಂಡು ಆಯೋಜಕರು ಸುಮ್ಮನಾಗಿದ್ದರು. ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಸರ್ ನರಕ ಅನುಭವಿಸ್ತಿದ್ದಾರೆ: ಜೈಲಿನಲ್ಲಿದ್ಧ ಖೈದಿ ಸಿದ್ಧಾರೂಢ

ಗಲಾಟೆ ಜಾಸ್ತಿ ಆಗುತ್ತಿದ್ದಂತೆ ಚಾಕು‌, ಡ್ರ್ಯಾಗರ್‌, ವಿಕೆಟ್‌ಗಳು ಹೊರಬಂದವು. ಶಾಲಾ ಮಕ್ಕಳ ಮುಂದೆಯೇ ಆಯುಧ ಪ್ರದರ್ಶಿಸಿ ಮಕ್ಕಳನ್ನೂ ಭಯಭೀತಗೊಳಿಸಿದರು. ಈ ವೇಳೆ ಪಂದ್ಯ ನೋಡಲು ಬಂದಿದ್ದ ಶಬ್ಬೀರ್ ಪುಂಡರ ಬಳಿ ಗಲಾಟೆ ಮಾಡದಂತೆ ಮನವಿ ಮಾಡಿದ್ದ. ಗಾಂಜಾ ಅಮಲಿನಲ್ಲಿದ್ದ ಯುವಕರು ಶಬ್ಬೀರ್ ತಲೆಗೆ ಚಾಕವಿನಿಂದ ಗುದ್ದಿ, ಹಲ್ಲೆ ನಡೆಸಿ ಮೊಬೈಲ್‌ ಪುಡಿ ಮಾಡಿದ್ದಾರೆ.

ಆರೋಪಿಗಳ ಬಂಧನ ಬಳಿಕ ಈ ಹಿಂದೆ ಇವರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎನ್ನುವುದು ತಿಳಿದುಬಂದಿದೆ. ಸದ್ಯ ಆರೋಪಿಗಳ ಮೇಲೆ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

 

Share This Article