ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ

Public TV
1 Min Read

ಆನೇಕಲ್: ವಿಲೇಜ್ ಅಕೌಂಟೆಂಟ್ (ಗ್ರಾಮ ಲೆಕ್ಕಿಗರು) ಆಗಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ಪಟ್ಟಣದ ಮುನಿ ವೀರಪ್ಪ ಗಲ್ಲಿಯಲ್ಲಿ ನಡೆದಿದೆ.

ಶ್ರೀನಿವಾಸ್ ರೆಡ್ಡಿ ಅವರ ಮನೆಯಲ್ಲಿ ವಾಸವಿದ್ದ ಆಲಿಯ ಅಂಜುಮ್ ಅಣ್ಣಿಗೇರಿ (22) ಮೃತ ಯುವತಿ. ಈಕೆ ಸರ್ಜಾಪುರ ನಾಡಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ (VA) ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

ಆನೆಕಲ್‌ ಪಟ್ಟಣದಲ್ಲಿ ತನ್ನ ಅಣ್ಣನೊಂದಿಗೆ ವಾಸವಿದ್ದರು. ಅಣ್ಣ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದನು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಆಲಿಯಾ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: 4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆ ಮುಂದುವರಿದಿದೆ.

Share This Article