ಕಾವೇರಿ ನದಿಗೆ ಹಾರಿ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ – 3 ದಿನಗಳ ಬಳಿಕ ಶವ ಪತ್ತೆ

Public TV
1 Min Read

ಚಾಮರಾಜನಗರ: ಕಾವೇರಿ ನದಿಗೆ (Cauvery River) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಗ್ರಾಮ ಲೆಕ್ಕಾಧಿಕಾರಿಯ (VA) ಶವ ಮೂರು ದಿನಗಳ ಬಳಿಕ ಪತ್ತೆಯಾದ ಘಟನೆ ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಯಡಕುರಿಯಾ ಬಳಿ ಪತ್ತೆಯಾಗಿದೆ.

ಕೊಳ್ಳೇಗಾಲ ತಾಲೂಕಿನ ಚೆಲುವನಹಳ್ಳಿ ಗ್ರಾಮದ ನಿವಾಸಿ ನಿರಂಜನ್ ಕುಮಾರ್ ಮೃತರೆಂದು ಗುರುತಿಸಲಾಗಿದೆ. ನಿರಂಜನ್ ಅವರು ಮಂಡ್ಯ ಜಿಲ್ಲೆಯ ಬಿ.ಜಿ ಪುರ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಇದನ್ನೂ ಓದಿ: ಪ್ರಭು ಚೌಹಾಣ್ ಪುತ್ರ ಯುವತಿಗೆ ವಂಚನೆ ಆರೋಪ – ಇಬ್ಬರೂ ಒಂದೇ ರೂಮ್‌ನಲ್ಲಿದ್ದ ಬಗ್ಗೆ ಸಾಕ್ಷಿ ಬಿಡುಗಡೆ

ನಿರಂಜನ್ ಕುಮಾರ್, ಜೂನ್ 17ರಂದು ಮಧ್ಯಾಹ್ನವರೆಗೆ ಕರ್ತವ್ಯ ನಿರ್ವಹಿಸಿ, ಬಳಿಕ ಕಾವೇರಿಪುರದ ಕಾವೇರಿ ಸೇತುವೆ ಬಳಿ ತನ್ನ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದರು ಎಂದು ಹೇಳಲಾಗಿದೆ. ಇದನ್ನೂ ಓದಿ: ಅನುಯಾಯಿಗಳಿಗೆ ಬೆತ್ತದಿಂದ ಹೊಡೆದು, ಮೂತ್ರ ಕುಡಿಸಿದ ಸ್ವಯಂಘೋಷಿತ ಬಾಬಾ

ನಂತರ, ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ನಿರಂತರ ಹುಡುಕಾಟದ ಬಳಿಕ ನಿರಂಜನ್ ಮೃತದೇಹ ಯಡಕುರಿಯಾ ಬಳಿ ಪತ್ತೆಯಾಗಿದೆ. ಇದೀಗ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article