ಅಕ್ಟೋಬರ್ 15 ರಂದು ಜೀ ಕನ್ನಡ ವಾಹಿನಿಯಲ್ಲಿ ‘ವಿಕ್ರಾಂತ್ ರೋಣ’

Public TV
2 Min Read

ವಿಕ್ರಾಂತ್ ರೋಣ (Vikrant Rona) ಕನ್ನಡ ಸಿನಿ ಪ್ರಿಯರು ಹಿಂದೆಂದೂ ಕಾಣದಂತ 3D ಅನುಭವ ನೀಡಿದಂತ ಅತ್ಯದ್ಭುತ ದೃಶ್ಯ ವೈಭವ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಈ ಚಿತ್ರ ಒಂದು ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಹೊಸತೊಂದು ಪ್ಯಾಂಟಸಿ ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡ ಹೋದ ಹೆಗ್ಗಳಿಕೆ ಹೊಂದಿದೆ. ಇದೀಗ ಕನ್ನಡದ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡ ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾವನ್ನು ಅದ್ಧೂರಿಯಾಗಿ World Television premiere ಮಾಡಲಿದೆ.

ಏಕಕಾಲಕ್ಕೆ ಹಲವಾರು ಭಾಷೆಗಳಲ್ಲಿ ತೆರೆಕಂಡು ಅದ್ಭುತ ಯಶಸ್ಸುಗಳಿಸಿರುವ ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ಇದರ ನಿರ್ದೇಶನದ ಜವಾಬ್ದಾರಿ ಹೊತ್ತು ಯಶಸ್ವಿಯಾಗಿದ್ದರೇ ಜಾಕ್ ಮಂಜು ಅವರು ಹಣಹೂಡಿಕೆ ಮಾಡಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

ಚಂದನವನದ ಸದ್ಯದ ಟ್ರೆಂಡ್ ಸೆಟ್ಟಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ  ಸಂಯೋಜನೆ ಹಾಗೂ ವಿಲಿಯಮ್ ಡೇವಿಡ್ ಅವರ ಭರ್ಜರಿ ಛಾಯಾಗ್ರಹಣವಿದೆ. ಬಹುಕೋಟಿ ವೆಚ್ಚದ ಈ ಚಿತ್ರದ ಹಂಚಿಕೆ ಜವಾಬ್ದಾರಿಯನ್ನು ದೇಶದ ಅತಿದೊಡ್ಡ ಮನರಂಜನಾ ಸಂಸ್ಥೆಯಾದ ಜೀ ಸ್ಟುಡಿಯೋಸ್ ವಹಿಸಿದ್ದು ವಿಶೇಷ .

ಇನ್ನು ವಿಕ್ರಾಂತ್ ರೋಣ ಚಿತ್ರ ಶ್ರೀಮಂತ ತಾರಾಗಣಕ್ಕೆ ಸಾಕ್ಷಿಯಾಗಿದ್ದು ಕಿಚ್ಚ ಸುದೀಪ್ ಸೇರಿದಂತೆ  ನಿರೂಪ್ ಭಂಡಾರಿ , ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಇನ್ನು ಅನೇಕರು ಇದರ ಭಾಗವಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟ ಹಾರಿಸಿದ ಹೆಮ್ಮೆಯ ವಿಷಯಕ್ಕೆ ಪಾತ್ರವಾಗಿದೆ ಈ ಚಿತ್ರತಂಡ.

ಇನ್ನು ಕಿಚ್ಚ ಸುದೀಪ್ ಅವರು ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandes)  ಜೊತೆ ಹೆಜ್ಜೆ ಹಾಕಿರುವ ʼರಾರಾ ರಕ್ಕಮ್ಮ ಹಾಡುʼ ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದು ಈಗಲೂ ಸೋಷಿಯಲ್ ಮೀಡಿಯಾದಲ್ಲಿ, ರೀಲ್ಸ್ ಗಳಲ್ಲಿ ಅತಿಹೆಚ್ಚು ಬಳಕೆಯಲ್ಲಿದೆ. ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾ ಅದ್ಧೂರಿಯಾಗಿ World Television premiere ಆಗುತ್ತಿದ್ದು, ಮನೆಮಂದಿಯೆಲ್ಲಾ ಕೂತು ನೋಡಿ ವಿಶೇಷವಾದ ಪ್ಯಾಂಟಸಿ ಲೋಕಕ್ಕೆ ಹೋಗಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *