Chiyaan 62: ಸಂಭಾವನೆ ದುಪ್ಪಟ್ಟು ಮಾಡಿಕೊಂಡ ಚಿಯಾನ್‌ ವಿಕ್ರಮ್‌

By
1 Min Read

ಸೌತ್‌ನ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್‌ಗೆ ವಯಸ್ಸು 58 ವರ್ಷ ಆಗಿದ್ರೂ ಚಿರಯುವಕನಂತೆಯೇ ಇದ್ದಾರೆ. ಸಿನಿಮಾದಿಂದ ಸಿನಿಮಾಗೆ ಹೊಸ ಬದಲಾವಣೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗಿರುವಾಗ ಚಿಯಾನ್ ತಮ್ಮ ಸಂಭಾವನೆ ದುಪ್ಪಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

 

View this post on Instagram

 

A post shared by Vikram (@the_real_chiyaan)

‘ಪೊನ್ನಿಯನ್ ಸೆಲ್ವನ್ 2’ ಸಕ್ಸಸ್ ಬಳಿಕ ಚಿಯಾನ್ ಮತ್ತೆ ತಮ್ಮ ಸಂಭಾವನೆಯನ್ನ ಡಬಲ್‌ ಮಾಡಿಕೊಂಡಿದ್ದಾರೆ. ಒಂದು ಸಿನಿಮಾಗೆ ಚಿಯಾನ್ 25 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಈಗ ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಮುಂಬರುವ ಚಿಯಾನ್‌ 62ನೇ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಅರುಣ್‌ ಕುಮಾರ್‌ ನಿರ್ಮಾಣದ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದೇ ಚಿಯಾನ್‌ ಬಗ್ಗೆ ಗುಸು ಗುಸು ಶುರುವಾಗಿದೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್ 2’ ಚಿತ್ರದ ಯಶಸ್ಸಿನ ಬಳಿಕ ತಂಗಳನ್ ಚಿತ್ರ ಮತ್ತು ಚಿಯಾನ್‌ 62ನೇ ಸಿನಿಮಾದತ್ತ ಗಮನ ನೀಡುತ್ತಿದ್ದಾರೆ. ಹೀಗಿರುವಾಗ ‘ತಂಗಳನ್‌’ ತನ್ನ ಪಾತ್ರಕ್ಕಾಗಿ ಮತ್ತೆ ಲುಕ್ ಬದಲಿಸಿಕೊಂಡಿದ್ದಾರೆ. ಹೊಸ ಶೇಡ್‌ನಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನಾಗಚೈತನ್ಯ ಜೊತೆ ಮತ್ತೆ ಒಂದಾಗುವ ಮುನ್ಸೂಚನೆ ಕೊಟ್ರಾ ಸಮಂತಾ

‘ತಂಗಳನ್’ ಸಿನಿಮಾದ ಶೂಟಿಂಗ್ ಕೋಲಾರದ ಗಣಿ ಕೆಜಿಎಫ್‌ನಲ್ಲಿ ನಡೆದಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸ ನಡೆಯುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Share This Article