ನಟ ಕಮಲ್ ಹಾಸನ್ ಸಹೋದರಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

Public TV
1 Min Read

ಕಾಲಿವುಡ್ ನಟ ಕಮಲ್ ಹಾಸನ್ (Kamal Haasan) ಅವರ ಹಿರಿಯ ಸಹೋದರ ಚಾರು ಹಾಸನ್ (Charu Haasan) ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಹಿರಿಯ ಮಗಳು ಸುಹಾಸಿನಿ (Suhasini) ಅವರು ತಂದೆ ಚಾರು ಹಾಸನ್‌ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸುಹಾಸಿನಿ ಮಣಿರತ್ನಂ ಸೋಷಿಯಲ್ ಮೀಡಿಯಾದಲ್ಲಿ ತಂದೆಯನ್ನು ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿ, ನೀವು ಇದನ್ನು ನನ್ನ ತಂದೆಗೆ ವೈದ್ಯಕೀಯ ವಾಸ್ತವ್ಯ ಎಂದು ಕರೆಯುತ್ತೀರಾ? ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು, ದಾದಿಯರು ಮತ್ತು ಪುತ್ರಿಯರ ಪ್ರೀತಿ ಮತ್ತು ಕಾಳಜಿಯಿಂದ ಅವರು ಚೇತರಿಸಿಕೊಳ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್‌ ಜೊತೆಗಿನ ಜ್ಯೂ.ಎನ್‌ಟಿಆರ್‌ ಹೊಸ ಸಿನಿಮಾ

91 ವರ್ಷದ ಚಾರು ಹಾಸನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಈಗ ಸೂಕ್ತ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ತಿದ್ದಾರೆ.

ಅಂದಹಾಗೆ, ಚಾರು ಹಾಸನ್ ಅವರು ನಟ, ನಿರ್ದೇಶಕ, ನಿವೃತ್ತ ವಕೀಲರಾಗಿದ್ದರು. ಕನ್ನಡ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಅವರು ನಟಿಸಿದ್ದಾರೆ.

Share This Article