ತಮಿಳುನಾಡಲ್ಲಿ ವಿಜಯ್ ದಳಪತಿ ರಣಕಹಳೆ

Public TV
2 Min Read

ಳಪತಿ ವಿಜಯ್ ತಮಿಳುನಾಡಿನಲ್ಲಿ (Tamil Nadu) ರಣಕಹಳೆ ಊದಿದ್ದಾರೆ. 2026ರ ಚುನಾವಣೆಗಾಗಿ (Election) ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದು, ಮಧುರೈನಲ್ಲಿ ಟಿವಿಕೆ ಪಕ್ಷದ ಸಮಾವೇಶಕ್ಕೆ ಹರಿದು ಬಂದ ಜನಸಾಗರ ನೋಡಿ ನಟ ವಿಜಯ್ (Vijay) ಭಾವುಕರಾಗಿದ್ದಾರೆ.

ಜನ ನಾಯಗನ್ (Jana Nayagan) ಸಿನಿಮಾ ಮುಗಿಸಿ ರಾಜಕೀಯ ರಣರಂಗದಲ್ಲಿ ಸೆಣಸಾಡಲು ಪಣ ತೊಟ್ಟು ನಿಂತಿದ್ದಾರೆ. ವಿಜಯ್ ದಳಪತಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಪೂರ್ತಿಯಾಗಿ ರಾಜಕೀಯ ರಂಗದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ. ವಿಜಯ್ ತಮ್ಮ ಕೊನೆಯ ಸಿನಿಮಾ ಜನ ನಾಯಗನ್ ಮುಗಿಸಿ ಕಂಪ್ಲೀಟ್ ಆಗಿ ರಾಜಕೀಯದಲ್ಲೇ ತೊಡಗಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

ಸದ್ಯ ತಮ್ಮ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ವಿಜಯ್ ದಳಪತಿ ಸದ್ಯದಲ್ಲಿಯೇ ಸಿನಿಮಾದ ಶೂಟಿಂಗ್ ಮುಗಿಸಿಕೊಡಲಿದ್ದಾರೆ. ಅಂದಹಾಗೆ ಜನ ನಾಯಗನ್ ಚಿತ್ರ 2026ರ ಸಂಕ್ರಾಂತಿಗೆ ಅಭಿಮಾನಿಗಳ ಮುಂದೆ ದರ್ಶನ ನೀಡಲಿದೆ. ಈ ನಿಟ್ಟಿನಲ್ಲಿ ಒಂದು ಕಡೆ ಸಿನಿಮಾ ತಂಡ ತಯಾರಿಯನ್ನ ಮಾಡಿಕೊಂಡಿದೆ. ಇದರ ಜೊತೆ ಜೊತೆಗೆ ತಮ್ಮ ಪಕ್ಷ ಕಟ್ಟುವ ಕಾರ್ಯದಲ್ಲಿ ವಿಜಯ್ ಸದಾ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಮಧುರೈನ ಸಮಾವೇಶದಲ್ಲಿ ವಿಜಯ್ ಗುಡುಗಿಗೆ ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿ ಕಂಪನ ಶುರುವಾಗಿದೆ.

ಮಧುರೈನಲ್ಲಿ ನಡೆದ ಸಮಾವೇಶಕ್ಕೆ ಜನ ಸಾಗರವೇ ಹರಿದು ಬಂದಿದೆ. ವಿಜಯ್ ವೇದಿಕೆ ಮೇಲೆ ಆಡಿದ ಒಂದೊಂದು ಮಾತಿಗೆ ವಿಜಯ್ ಅಭಿಮಾನಿ ಬಳಗ ಹಾಗೂ ತಮಿಳು ನಾಡಿನ ಜನ ರಣಕೇಕೆ ಹಾಕಿ ಕುಣಿದಿದೆ. 234 ಕ್ಷೇತ್ರದಲ್ಲೂ ನಾನೇ ಸ್ಪರ್ಧಿಸಿದ ಹಾಗೆ ಎನ್ನುವ ಮಾತಿಗೆ ಸಮ್ಮತ ನೀಡಿದ್ದಾರೆ ತಮಿಳುನಾಡಿನ ಜನ. ವಿಜಯ್ ದಳಪತಿ ಸಿನಿಮಾರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶ ಮಾಡಲು ಸಖತ್ ರೆಸ್ಪಾನ್ಸ್ ಸಿಕ್ತಿದೆ. ಅಲ್ಲದೇ ತಮ್ಮ ನಾಯಕನ ಮೂಲಕ ಮತ್ತಷ್ಟು ಅಭಿವೃದ್ದಿ ಹಾಗೂ ಬದಲಾವಣೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಜನ.

ವಿಜಯ್ ದಳಪತಿ ತಮ್ಮ ಸಿನಿಮಾ ಮೂಲಕ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅವರ ಅಭಿಮಾನಿ ಬಳಗ ಹಾಗೂ ಅವರ ಮೇಲಿನ ಅಭಿಮಾನ ಮತ್ತೊಮ್ಮೆ ಪ್ರೂವ್ ಆಗಿದೆ. ಮಧುರೈನ ಸಮಾವೇಶಕ್ಕೆ ಲಕ್ಷಾಂತರ ಜನ ಸೇರಿದ್ದಾರೆ. ಈ ಅಪಾರ ಜನಸಂಖ್ಯೆಯನ್ನ ನೋಡಿ ವೇದಿಕೆ ಮೇಲೆ ವಿಜಯ್ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಈ ವೇಳೆ ತಮಿಳುನಾಡಿನ ಜನರಿಗೆ ಕೆಲವೊಂದಿಷ್ಟು ಮಾತುಗಳನ್ನ ಕೊಟ್ಟಿದ್ದಾರೆ. ತಮ್ಮ ಪಕ್ಷ ಸ್ವತಂತ್ರವಾಗಿರಲಿದೆ ಯಾವುದೇ ಪಕ್ಷದೊಂದಿದೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

Share This Article