ನಾರ್ವೆಯಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡ ವಿಜಯ್

Public TV
1 Min Read

ಕಾಲಿವುಡ್ (Kollywood) ಹೀರೋ ದಳಪತಿ ವಿಜಯ್- ಸಂಗೀತಾ (Sangeetha) ದಂಪತಿ ಡಿವೋರ್ಸ್ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ ವಿಜಯ್ ಅವರು ಹೀರೋಯಿನ್ ತ್ರಿಷಾ ಜೊತೆಯಲ್ಲಿ ನಾರ್ವೆಯಲ್ಲಿ ಕಾಣಿಸಿಕೊಂಡಿದ್ದಾರೆ. `ಲಿಯೋ’ ಸಿನಿಮಾಗಾಗಿ ಮತ್ತೆ ಒಂದಾಗಿರುವ ಈ ಜೋಡಿ ಈಗ ತಮ್ಮ ಖಾಸಗಿ ವಿಚಾರವಾಗಿ ಇಬ್ಬರು ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಜೊತೆಯಾಗಿ ನಾರ್ವೆಯಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

‘ಲಿಯೋ’ (Leo) ಚಿತ್ರದ ಚಿತ್ರೀಕರಣ ಮುಗಿಸಿದ ವಿಜಯ್(Thalapathy Vijay), ವಿರಾಮಕ್ಕೆಂದು ನಾರ್ವೆಗೆ ಹೋಗಿದ್ದಾರೆ. ಅಲ್ಲಿ ಅವರು ನಾರ್ವೆಯಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡಿದ್ದು, ಸದ್ಯ ವಿಜಯ್ ಪತ್ನಿ ಸಂಗೀತಾಗೆ ಡಿವೋರ್ಸ್ (Divorce) ಕೊಡಲಿದ್ದಾರೆಯೇ ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿವೆ. 5 ವರ್ಷಗಳ ನಂತರ ಸಿನಿಮಾದಲ್ಲಿ ಒಂದಾಗುತ್ತಿರುವ ವಿಜಯ್- ತ್ರಿಷಾ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ನಾರ್ವೆಯಲ್ಲಿ ಈ ಜೋಡಿ ಜೊತೆಯಾಗಿ ಓಡಾಡ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಟ ವಿಜಯ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಈ ವಿಷಯ ಹೊರಬಂದಿದೆ. ವಿಜಯ್- ತ್ರಿಷಾ ಡೇಟಿಂಗ್ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದು, ಡಿವೋರ್ಸ್ ಪಕ್ಕಾ ಎನ್ನುವ ಮಾತುಗಳು ಸಹ ಕೇಳಿ ಬಂದಿದೆ. ಇದನ್ನೂ ಓದಿ:ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಗ ಸಮರ್ಜಿತ್ ಗ್ರ್ಯಾಂಡ್ ಎಂಟ್ರಿ

ಸಿಂಗಲ್ ಆಗಿರೋ ನಟಿ ತ್ರಿಷಾ ಈಗ ವಿಜಯ್ ಜೊತೆ ಮಿಂಗಲ್ ಆಗೋಕೆ ಸಿದ್ಧರಾದ್ರಾ? ಅದಕ್ಕೆ ಲಿಯೋ ಸಿನಿಮಾಗೆ ತ್ರಿಷಾರನ್ನ ನಾಯಕಿಯಾಗಿ ಹಾಕಿಕೊಂಡ್ರಾ ಹೀಗೆ ಸಾಕಷ್ಟು ಅನುಮಾನಗಳು ಅಭಿಮಾನಿಗಳನ್ನ ಕಾಡ್ತಿವೆ. ಈ ಸುದ್ದಿಗೆ ‘ಲಿಯೋ’ ಜೋಡಿ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್