ಯಡಿಯೂರಪ್ಪರಂತೆ ಅವರ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಬೇಕು: ರೇಣುಕಾಚಾರ್ಯ

Public TV
2 Min Read

ದಾವಣಗೆರೆ: ಯಡಿಯೂರಪ್ಪರಂತೆ (Yediyurappa) ಅವರ ಪುತ್ರ ವಿಜಯೇಂದ್ರ (Vijayendra) ರಾಜ್ಯಾಧ್ಯಕ್ಷ ಆಗಬೇಕು. ಬಿಎಸ್‌ವೈ ಪುತ್ರ ಎಂದು ಕೊಡಬೇಡಿ, ಅತನ ಸಂಘಟನೆ ನೋಡಿ‌ ಕೊಡ್ಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ರಾಜ್ಯಧ್ಯಕ್ಷರ ಸ್ಥಾನದ ಹೊಸ ಬಾಂಬ್ ಸಿಡಿಸಿದರು.

ದಾವಣಗೆರೆಯಲ್ಲಿ (Davanagere) ಸ್ಫೋಟಕ ಹೇಳಿಕೆ ನೀಡಿದ ರೇಣುಕಾಚಾರ್ಯ (Renukacharya), ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನೈತಿಕ ಹೊಣೆ ಹೊತ್ತು ರಾಜೀನಾಮೆ ‌ನೀಡಿಲ್ಲ. ಆತ್ಮವಲೋಕನ ಮಾಡಿಕೊಂಡು ಮುನ್ನಡೆದರೆ ಬಿಜೆಪಿಗೆ ಒಳಿತು. ಅದನ್ನು ಬಿಟ್ಟು ಮೋದಿಯವರ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಅದನ್ನು ಮತಗಳಾಗಿ ಪರಿವರ್ತನೆ ಮಾಡೋದು ರಾಜ್ಯ ನಾಯಕರ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರೈತರ ಹೊಟ್ಟೆ ಉರಿಯುತ್ತಿದೆ ಅಂತ ಹಸಿರು ಮೆಣಸಿನಕಾಯಿ ತಿಂದು ಆಕ್ರೋಶ

ಬಿಜೆಪಿ 10 ವರ್ಷ ಬರಬಾರದು ಎಂದು ನಮ್ಮ ನಾಯಕರೇ ಹೀಗೆ ಮಾಡಿರಬಹುದು. ಬಿಜೆಪಿಗೆ ಸಮರ್ಥ ನಾಯಕರ ಅಡಳಿತ ಬೇಕಾಗಿದೆ. ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ‌. ವಿಜಯೇಂದ್ರ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಕಡೆ ಓಡಾಡಿ ಸಂಘಟನೆ ಮಾಡಿದ್ದಾರೆ. ಅದ್ದರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ವಿಜಯೇಂದ್ರಗೆ ನೀಡಬೇಕು ಎಂದು ಒತ್ತಾಯಿಸುವೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ, ಬಿಜೆಪಿ ಕಾರ್ಯಕರ್ತರಿಗೆ ಅಸ್ತಿತ್ವದ ಪ್ರಶ್ನೆಯಾಗುತ್ತದೆ. ಒಂದು ಪಕ್ಷದ ವಿರುದ್ಧ ನಾವು ಮೈತ್ರಿಯಾಗಬಾರದು. ರಾಜ್ಯದ ಅಭಿವೃದ್ಧಿಗೆ ಮೈತ್ರಿ ಮಾಡಿಕೊಂಡು ಒಂದಾಗಬೇಕು. ನೆಲ-ಜಲದ ವಿಚಾರದ ಬಗ್ಗೆ ಮೈತ್ರಿಯಾಗಬೇಕು. ಅದನ್ನು ಬಿಟ್ಟು ಒಂದು ಸರ್ಕಾರ, ಪಕ್ಷವನ್ನು ಸೋಲಿಸಲು ಒಂದಾಗೋದು ಸರಿಯಲ್ಲ ಎಂದರು. ಇದನ್ನೂ ಓದಿ: CWRC, CWMA, ಸುಪ್ರೀಂ ಕೋರ್ಟ್‌ ಮುಂದೆ ವಾಸ್ತವಾಂಶ ಇಟ್ಟರೂ ನ್ಯಾಯ ಸಿಗ್ತಿಲ್ಲ: ಸಿಎಂ

ಕಾವೇರಿ ನೀರಿಗಾಗಿ ಹಲವು ಸಂಘಟನೆಗಳ ಬೆಂಬಲದೊಂದಿಗೆ ಕರ್ನಾಟಕ ಬಂದ್ ನಡೆಯುತ್ತಿದ್ದು, ಇವತ್ತು ತಮಿಳುನಾಡಿಗೆ ನೀರು ಬಿಡುವ ಅವಶ್ಯಕತೆ ಇರಲಿಲ್ಲ. ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು ಎಂದು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರ ಇರಬಹುದು, ರಾಜ್ಯ ಸರ್ಕಾರ ಇರಬಹುದು. ಇಬ್ಬರಿಗೂ ಒತ್ತಾಯ ಮಾಡುತ್ತೇನೆ. ಪ್ರತಿ ವರ್ಷ ಇದೇ ರೀತಿ ಪ್ರತಿಭಟನೆ‌, ಬಂದ್ ಮಾಡಬೇಕಾಗುತ್ತದೆ. ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನೇನು ಕಾಂಗ್ರೆಸ್ ವಕ್ತಾರ ಅಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆಯದಾಗಿ ಮಾತನಾಡಬೇಕಿದೆ. ತೀವ್ರವಾದ ಸಂಕಷ್ಟವನ್ನು ರೈತರು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಬರ ಪರಿಹಾರ ನೀಡಬೇಕು. ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಪರವಾಗಿ ಸರ್ಕಾರ ನಿಲ್ಲಬೇಕಾಗಿದೆ ಎಂದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್