ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ರಾಜ್ಯಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಲಿ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಬದಲಿಸುವಂತೆ ವಿರೋಧಿ ಬಣದ ನಾಯಕರು ದೆಹಲಿಯಲ್ಲಿ ಪ್ರಯತ್ನ ನಡೆಸುತ್ತಿರುವ ಹೊತ್ತಲ್ಲೇ ರಾಜ್ಯಧ್ಯಕ್ಷರ ಪರ ಬ್ಯಾಟ್ ಮಾಡಲು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ನೇತೃತ್ವದ ತಂಡ ದೆಹಲಿಗೆ ಆಗಮಿಸಿದೆ.
ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ನಾಯಕರಾದ ರಾಜಶೇಖರ್, ಮಾಡಾಳ್ ಮಲ್ಲಿಕಾರ್ಜುನ್ ಮತ್ತಿತರರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದು ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳುತ್ತಿದ್ದಾರೆ. ಇದನ್ನೂ ಓದಿ: ಕಾರವಾರ | ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ರಾಜ್ಯಾಧ್ಯಕ್ಷರ ನೇಮಕ ಮಾಡಿರೋದು ನಮ್ಮ ಹೈಕಮಾಂಡ್. ಬಿ.ವೈ ವಿಜಯೇಂದ್ರ ಅವರು ಹಳೆ ಬೇರು ಹೊಸ ಚಿಗುರು ರೀತಿಯಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸುವ ಅಗತ್ಯ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ
ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚಿಸಲು ದೆಹಲಿಗೆ ಬಂದಿಲ್ಲ. ಖಾಸಗಿ ಕಾರ್ಯಕ್ರಮ ಹಿನ್ನೆಲೆ ದೆಹಲಿ ಭೇಟಿ ಅಷ್ಟೇ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ ಎಂದರು. ಇದನ್ನೂ ಓದಿ: ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ – 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ
ನಮ್ಮಲ್ಲಿ ಯಾವುದೇ ಪರ-ವಿರೋಧ, ಭಿನ್ನಮತ ಇಲ್ಲ, ಅಭಿಪ್ರಾಯ ವ್ಯತ್ಯಾಸ ಅಷ್ಟೇ. ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಬೇಕು. ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ಕಲಹ, ರೋಗಗ್ರಸ್ತ ಕಾಂಗ್ರೆಸ್ ಆಗಿದೆ. ಸುಳ್ಳು ಭರವಸೆ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು. 40% ಸಿಎಂ ಅಂದರು, ಈಗ ಅವರು 80% ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 3 ವರ್ಷದ ಹಿಂದೆ ಕಾಗೆ ಹೊತ್ತೊಯ್ದ ಚಿನ್ನದ ಬಳೆ ಮರಳಿ ಒಡತಿಯ ಕೈಗೆ
ಗ್ರಾಮಿಣ ಭಾಗದಲ್ಲಿ ಬಸ್‌ಗಳು ಇಲ್ಲ, ಆದರೂ 500 ಕೋಟಿ ಟಿಕೆಟ್ ವಿತರಣೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ಸರ್ಕಾರದ ವಿರುದ್ಧ ಮೂಡಾ ವಿಚಾರದಲ್ಲಿ ವಿಜಯೇಂದ್ರ ಹೋರಾಟ ಮಾಡಿದ್ದರು. ವಾಲ್ಮೀಕಿ ಹಗರಣ ಆಗಿತ್ತು, ನಾಗೇಂದ್ರ ತಲೆದಂಡ ಆಯ್ತು. ಕಾಂಗ್ರೆಸ್ ಸರ್ಕಾರ ಸತ್ತಿದೆ ಬದುಕಿಲ್ಲ, ಆಂತರಿಕ ಕಚ್ಚಾಟದಿಂದ ಸರ್ಕಾರ ಪತನ ಆಗಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಶಾಸಕರ ಸಭೆ, ಸಚಿವರ ಸಭೆ ನಡೆಸಿ ಹಫ್ತಾ ವಸೂಲಿ ಮಾಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬಸ್ಸಿಗಾಗಿ ಹೆದ್ದಾರಿ ಬಂದ್ ಮಾಡಿ ಸುವರ್ಣ ಸೌಧದ ಮುಂಭಾಗ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ