ಬಿಜೆಪಿಯಲ್ಲಿ ವಿಜಯೇಂದ್ರ ಬಿಟ್ರೆ ರಾಜ್ಯಾಧ್ಯಕ್ಷ ಆಗ್ತೀವಿ ಅಂತ ಹೇಳೋ ನಾಯಕರಿಲ್ಲ: ಎಸ್.ಆರ್ ವಿಶ್ವನಾಥ್

Public TV
2 Min Read

– ಇನ್ನೊಂದು ವರ್ಷ ಬಿವೈವಿ ಮುಂದುವರೆಯಲಿ

ಬೆಂಗಳೂರು: ಬಿಜೆಪಿಯಲ್ಲಿ (BJP) ವಿಜಯೇಂದ್ರಗೆ (B.Y Vijayendra) ಪರ್ಯಾಯವಾಗಿ ರಾಜ್ಯಾಧ್ಯಕ್ಷ ಆಗ್ತೀವಿ ಅನ್ನೋ ಬೇರೆ ನಾಯಕರು ಇಲ್ಲ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ( S.R. Vishwanath) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಅವರು, ಎರಡೇ ವರ್ಷಕ್ಕೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ರೆ ಅವಕಾಶ ಕಿತ್ತುಕೊಂಡಂತೆ ಆಗಲಿದೆ.‌ ಹಾಗಾಗಿ ಇದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬೇಕು. ವಿಜಯೇಂದ್ರಗೆ ಎರಡು ವರ್ಷದ ಅವಕಾಶ ಕೊಟ್ಟಿದ್ದಾರೆ. ಇನ್ನೂ ಒಂದು ವರ್ಷ ಅವಕಾಶ ಕೊಟ್ಟರೆ ಪೂರ್ಣ ಅವಕಾಶ ಕೊಟ್ಟಂತಾಗಲಿದೆ. ಯಾವುದೇ ಅಧ್ಯಕ್ಷರಿಗೆ ಮೂರು ವರ್ಷ ಅವಕಾಶ ಕೊಡಬೇಕು. ಯಾರಿಗೇ ಆಗಲೀ ಪೂರ್ಣ ಅವಕಾಶ ಕೊಟ್ಟು ನೋಡಬೇಕು ಎಂದು ವಿಜಯೇಂದ್ರರನ್ನು ಇನ್ನೂ ಒಂದು ವರ್ಷ ಮುಂದುವರೆಸಬೇಕು ಎಂದು ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್ | ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು BSY ಸೇರಿ 4 ಆರೋಪಿಗಳಿಗೆ ಸಮನ್ಸ್

ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಎರಡು ವರ್ಷ ಪೂರೈಸಿದ್ದಾರೆ. ಅವರು ಎರಡು ವರ್ಷ ಮುಗಿಸಿದ್ದು ಗೊತ್ತೇ ಆಗಲಿಲ್ಲ. ಬಹಳ ಚಿಕ್ಕ ವಯಸ್ಸಿಗೆ ಪಕ್ಷ ಅವರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ವಿಪಕ್ಷ ನಾಯಕರ ಜತೆ ಸೇರಿಕೊಂಡು ವಿಜಯೇಂದ್ರ ಅವರು ಅನೇಕ ಹೋರಾಟ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ವಿಜಯೇಂದ್ರ ಮುಂದೆ ಇನ್ನೂ ದೊಡ್ಡ ಸವಾಲಿದೆ. ಹಲವು ಚುನಾವಣೆಗಳು ಶುರು ಆಗಲಿವೆ. ಅವರು ಇನ್ನೂ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗಬೇಕು. ಇದು ಅವರ ಮುಂದೆ ಇರುವ ದೊಡ್ಡ ಸವಾಲು. ವಿಜಯೇಂದ್ರ ಏಕಾಂಗಿಯಾಗಿ ಪಕ್ಷ ಸಂಘಟನೆ ಮಾಡೋದು ಬಹಳ ಕಷ್ಟ ಇದೆ.‌ ಇನ್ನೂ ಜಿಲ್ಲೆಗಳಲ್ಲಿ ಪರಿಪೂರ್ಣ ಜವಾಬ್ದಾರಿಗಳು ಸಿಗಬೇಕು. ಪೂರ್ಣ ಪ್ರಮಾಣದ ಸಂಘಟನೆ ರಚನೆ ಆದಾಗ ವಿಜಯೇಂದ್ರಗೆ ಇನ್ನೂ ಹೆಚ್ಚಿನ ಬಲ ಸಿಗಲಿದೆ ಎಂದು ಇದೇ ವೇಳೆ ಹೇಳಿದ್ದಾರೆ.

ಜಿಬಿಎ ಚುನಾವಣೆಗೆ ಬಿಜೆಪಿಯಿಂದ ರಚಿಸಿದ ಸಂಯೋಜನಾ ಸಮಿತಿಯಲ್ಲಿ ತಮ್ಮನ್ನು ಕೈಬಿಟ್ಟಿರುವ ವಿಚಾರವಾಗಿ ಮಾತಾಡಿದ ವಿಶ್ವನಾಥ್, ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಅದರ ಬಗ್ಗೆ ಮಾತಾಡಿದ್ದಾರೆ. ಜಿಬಿಎ ಚುನಾವಣೆ ಗೆಲ್ಲಲು ಇನ್ನೂ ಸಮರ್ಥ ತಂಡ ರಚಿಸೋದಾಗಿ ಹೇಳಿದ್ದಾರೆ. ಹಲವು ಅರ್ಹ ನಾಯಕರನ್ನು ಸಮಿತಿಯಿಂದ ಕೈಬಿಟ್ಟಿದ್ದಾರೆ. ಅಂಥ ನಾಯಕರನ್ನು ಸೇರಿಸಿಕೊಂಡು ಹೊಸ ಸಮಿತಿ ‌ಮಾಡ್ತೀವಿ ಅಂದಿದ್ದಾರೆ. ಯಾರೋ ಕೆಲವರು ಈಗಿರುವ ಸಮಿತಿ ಮಾಡಿ ಗೊಂದಲ ಮಾಡಿದ್ದಾರೆ. ಮತ್ತೆ ಎಲ್ಲ‌ ಪ್ರಮುಖರು ಚರ್ಚಿಸಿ ಪ್ರಬಲ ನಾಯಕರ ತಂಡ ಇರುವ ಸಮಿತಿ ಮಾಡ್ತಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಕಸ ಗುಡಿಸಲು ದುಬಾರಿ ವೆಚ್ಚ – ಸರ್ಕಾರದ ವಿರುದ್ಧ ನಿಖಿಲ್ ಕಿಡಿ

Share This Article