ಶಾಸಕ ಯತ್ನಾಳ್‌, ರಾಜ್ಯಾಧ್ಯಕ್ಷ ವಿಜಯೇಂದ್ರ ಸಮಾಗಮ!

Public TV
1 Min Read

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (B. Y. Vijayendra) ಮತ್ತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಸತ್‌ನಲ್ಲಿ ರಾಜ್ಯ ಬಿಜೆಪಿ ನಾಯಕರು ಒಟ್ಟಾಗಿ ಸೇರಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಬಸನಗೌಡ ಪಾಟೀಲ್‌ ಯತ್ನಾಳ್, ಬಿ.ವಿ ನಾಯಕ್, ಮಾಜಿ ಸಚಿವ ರಮೇಶ್ ಜಾರಕಿಹೋಳಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು‌, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ

ರಾಜ್ಯಾಧ್ಯಕ್ಷರಾದ ನಂತರ ವಿಜಯೇಂದ್ರ ಜೊತೆ ಯತ್ನಾಳ್‌ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪಕ್ಷದ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲೂ ಯತ್ನಾಳ್ ದೂರ ಉಳಿದಿದ್ದರು. ವಿಜಯಪುರದಲ್ಲಿ ವಿಜಯೇಂದ್ರ ಭೇಟಿ ವೇಳೆಯಲ್ಲೂ ಯತ್ನಾಳ್ ಕಾಣಿಸಿರಲಿಲ್ಲ.  ಇದನ್ನೂ ಓದಿ: ಪ್ರಧಾನಿಯನ್ನು ಭೇಟಿಯಾದ ಸುಮಲತಾ – ಮಂಡ್ಯ ದೋಸ್ತಿ ರಾಜಕೀಯದಲ್ಲಿ ಢವಢವ!

ಇಂದು ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಯತ್ನಾಳ್ ಜೊತೆ ಮೊದಲ‌ ಮುಖಾಮುಖಿ ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಮಾತುಕತೆ ವೇಳೆ ಇದು ಆಕಸ್ಮಿಕ ಭೇಟಿಯೋ? ಇಬ್ಬರು ನಾಯಕರ ಮಧ್ಯೆ ನಡೆದ ಸಂಧಾನವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

Share This Article