ವಿಜಯಪುರ | ರೈತರಿಗೆ ‌ವಕ್ಫ್ ಬೋರ್ಡ್ ಕೊಟ್ಟ ನೋಟಿಸ್‌ ವಾಪಸ್ ಪಡೆಯುತ್ತೇವೆ: ಹೆಚ್.ಕೆ. ಪಾಟೀಲ್

Public TV
1 Min Read

ಬೆಂಗಳೂರು: ವಿಜಯಪುರದ (Vijayapura) ರೈತರಿಗೆ ‌ವಕ್ಫ್ ಬೋರ್ಡ್ (Waqf Board) ನೀಡಿರುವ ನೋಟಿಸ್‌ನ್ನು ವಾಪಸ್ ಪಡೆಯುತ್ತೇವೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ( H.K Patil ) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಜಮೀನು ಕಬಳಿಕೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬಿಜೆಪಿಯವರು ಅನಾವಶ್ಯಕವಾಗಿ ರಾಜಕೀಯ ಮಾಡ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡೋದು ಸೂಕ್ತ ಅಲ್ಲ. ರೈತರಿಗೆ ನೋಟಿಸ್‌ ಹೋಗಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಎಂ. ಬಿ ಪಾಟೀಲ್ ಹೇಳಿದ್ದಾರೆ. ಸರ್ಕಾರ ನೋಟಿಸ್‌ ವಾಪಸ್ ಪಡೆಯಲಿದೆ. ಅಲ್ಲಿನ ತಹಶಿಲ್ದಾರ್ ತಪ್ಪು ಮಾಡಿದ್ದಾರೆ. ಹೀಗಾಗಿ ನೋಟಿಸ್‌ ವಾಪಸ್ ಪಡೆಯೋ ಕೆಲಸ ಮಾಡ್ತೀವಿ. ರಾಜಕೀಯವಾಗಿ ಆರೋಪ ಮಾಡೋದು ಸರಿಯಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೊನ್ನೆ 11 ಸಾವಿರ ಅಂದಿದ್ರು, ಈಗ 15 ಸಾವಿರ ಎಕ್ರೆಗೆ ಏರಿಕೆಯಾಗಿದೆ: ಜಮೀರ್ ವಿರುದ್ಧ ಯತ್ನಾಳ್ ಕಿಡಿ

ಸಚಿವ ಜಮೀರ್ ಅಹಮದ್ ರಾಜೀನಾಮೆಗೆ ಬಿಜೆಪಿ ಅಗ್ರಹ ವಿಚಾರವಾಗಿ, ಜಮೀರ್ ಯಾಕೆ ರಾಜೀನಾಮೆ ಕೊಡಬೇಕು? ತಹಶಿಲ್ದಾರ್ ತಪ್ಪು‌ ಮಾಡಿರೋದು. ತಹಶಿಲ್ದಾರ್ ನೊಟೀಸ್ ಕೊಟ್ಟಿದ್ರೆ ಅದನ್ನು ಡಿಸಿ ನೋಡ್ತಾರೆ. ಅದಕ್ಕೂ ಮೇಲೆ ಸರ್ಕಾರ ಇದೆ. ಹೀಗಿರುವಾಗ ಜಮೀರ್ ಯಾಕೆ ರಾಜೀನಾಮೆ ನೀಡಬೇಕು? ಎಂ.ಬಿ ‌ಪಾಟೀಲ್ ಎಲ್ಲಾ ಗೊಂದಲಗಳನ್ನ ನಿವಾರಣೆ ಮಾಡಿದ್ದಾರೆ. ಈಗ ಯಾವುದೇ ಗೊಂದಲ‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

Share This Article