ಶಾಲಾ ಬಸ್ ಹಾಯ್ದು ಮೂರು ವರ್ಷದ ಮಗು ಸಾವು

Public TV
1 Min Read

ವಿಜಯಪುರ: ಶಾಲಾ ಬಸ್ ಹಾಯ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಕೆಐಡಿಬಿ ಕೈಗಾರಿಕೆ ಪ್ರದೇಶದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಭಕ್ತಿ ಗಿರಿಮಲ ನಿಡೋಣಿ (3) ಸಾವನ್ನಪ್ಪಿದ ಬಾಲಕಿ. ಶಾಲಾ ಬಸ್‍ನಲ್ಲಿ ಬಂದ ಅಕ್ಕನನ್ನು ಇಳಿಸಿಕೊಳ್ಳಲು ತಂದೆಯ ಜೊತೆ ಮಗು ಹೊರಗಡೆ ಬಂದಾಗ ಈ ಘಟನೆ ಸಂಭವಿಸಿದೆ.

ಶಾಲಾ ಬಸ್ಸಿನಲ್ಲಿ ಬಂದ ಅಕ್ಕಳನ್ನು ಇಳಿಸಿಕೊಳ್ಳಲು ತಂದೆಯ ಜೊತೆ ತೆರಳಿದ ಬಾಲಕಿ, ಅಕ್ಕ ಇಳಿದು ಬಂದಾಗ ಬಸ್ ಹಿಂದಿನಿಂದ ಬಂದಿದ್ದಾಳೆ. ಬಾಲಕಿಯನ್ನು ಗಮನಿಸದ ಬಸ್ ಚಾಲಕ ಮಗುವಿನ ಮೇಲೆ ಬಸ್ ಹರಿಸಿದ್ದರಿಂದ ಈ ದುರ್ಘಟನೆ ನಡೆದಿದೆ.

ಈ ಸಂಬಂಧ ಸ್ಥಳಕ್ಕೆ ವಿಜಯಪುರ ನಗರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಹನದ ಚಾಲಕನನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *